ದಲಿತರನ್ನು ಊಟಕ್ಕೆ ಕರೆದು ಬಿಎಸ್ ವೈ ಸಾಧನೆ ಮಾಡುತ್ತಿದ್ದಾರೆ- ಪರಮೇಶ್ವರ್
ಬೆಂಗಳೂರು: ದಲಿತರನ್ನು ಊಟಕ್ಕೆ ಕರೆದು ಬಿ.ಎಸ್ ಯಡಿಯೂರಪ್ಪ ದೊಡ್ಡ ಸಾಧನೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಾ.ಜಿ ಪರಮೇಶ್ವರ್ ಲೇವಡಿ ಮಾಡಿದ್ದಾರೆ. ಬಿಎಸ್ ವೈ ಅಧಿಕಾರದಲ್ಲಿದ್ದಾಗ ದಲಿತರನ್ನು ಕರೆಯಲಿಲ್ಲ, ಈಗ ಕರೆಯುತ್ತಿದ್ದಾರೆ. ದಲಿತರನ್ನು ಮನೆಗೆ ಕರೆದು ಹೊಟೇಲ್ ನಲ್ಲಿ ಊಟ ಹಾಕಿಸುತ್ತಾರೋ ನೋಡ್ಬೇಕು ಎಂದು ವ್ಯಂಗ್ಯ ನುಡಿದಿದ್ದಾರೆ.

ಈ ಬೆಳವಣಿಗೆ ಕಾಂಗ್ರೆಸ್ ಮೇಲೆ ಯಾವುದೇ ಪ್ರಭಾವ ಬಿರುವುದಿಲ್ಲ, ಇದರಿಂದ ಕಾಂಗ್ರೆಸ್ ಯಾವುದೇ ನಷ್ಟ- ಲಾಭವಿಲ್ಲ, ಆದರೆ ಒಂದತು ಸತ್ಯ ಬಿಜೆಪಿಗೆ ಲಾಭವಾಗುವುದೆನೋ ಗೊತ್ತಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ. ಇದೇ ವೇಳೆ ಪಂಜಾಹ್- ಹರ್ಯಾಣದಲ್ಲಿ ರಾಮ್ ರಹೀಮ್ ಬೆಂಬಲಿಗರ ಗಲಭೆ ಕುರಿತು ಮಾತನಾಡಿರುವ ಅವರು, ಅಲ್ಲಿನ ಸರ್ಕಾರ ಪರಿಸ್ಥಿತಿಯನ್ನು ಹತೋಟಿಗೆ ತರಬೇಕು ಎಂದರು. ಈ ಬಗ್ಗೆ ಸೂಕ್ತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸಿಎಂ ದಿನಾಂಕ ನಿಗದಿ ಮಾಡಿ, ಸಚಿವರಿಗೆ ಪ್ರಮಾಣ ವಚನ ಬೋಧಿಸುವುದು ಮಾತ್ರ ಬಾಕಿ ಇದೆ ಎಂದು ಪರಮೇಶ್ವರ್ ಹೇಳಿದರು.
Comments