33 ದಲಿತ ಕುಟುಂಬಗಳನ್ನ ಮನೆಗೆ ಬರುವಂತೆ ಆಹ್ವಾನ : ಯಡಿಯೂರಪ್ಪ
ಬಿಜೆಪಿ ನಡಿಗೆ ದಲಿತರ ಮನೆಗೆ ಎಂಬ ಜನಸಂಪರ್ಕ ಅಭಿಯಾನ ನಡೆಸಿದ್ದ ಮಾಜಿ ಸಿಎಂ ಯಡಿಯೂರಪ್ಪ ದಲಿತ ಕುಟುಂಬಗಳಿಗೆ ತಮ್ಮ ಮನೆಗೆ ಆಹ್ವಾನ ನೀಡಿದ್ದಾರೆ
ಜನ ಸಂಪರ್ಕ ಅಭಿಯಾನದ ಸಂದರ್ಭ ತಮಗೆ ಸತ್ಕರಿಸಿದ್ದ 33 ಕುಟುಂಬಗಳನ್ನ ಆಗಸ್ಟ್ 28ಕ್ಕೆ 33 ದಲಿತ ಕುಟುಂಬಗಳನ್ನ ಡಾಲರ್ಸ್ ಕಾಲೋನಿಯ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದು, ವಿಶಿಷ್ಟ ಸತ್ಕಾರ ಕುಡ ನಡೆಯಲಿದೆ. ವಿಶಿಷ್ಟ ಟಡುಗೆ ತಯಾರಿಸಿ ದಲಿತರ ಜೊತೆಯೇ ಯಡಿಯೂರಪ್ಪ ಊಟ ಮಾಡುವ ಸಾಧ್ಯತೆ ಇದೆ.
ಜನಸಂಪರ್ಕ ಸಭೆ ಸಂದರ್ಭ ಹೋಟೆಲ್`ನಿಂದ ತರಿಸಿದ ಆಹಾರವನ್ನ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಸೇವಿಸಿ ಬರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರ ಮಧ್ಯೆ, ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಲು ಯಡಿಯೂರಪ್ಪ ಈ ಔತಣಕೂಟ ಆಯೋಜಿಸಿದ್ದಾರೆ ಎನ್ನಲಾಗಿದೆ.
Comments