'150 ಮಿಷನ್' +ಗುರಿ ಸಾಕಾರಗೊಳ್ಳಲು ಸಮೀಪ? ರಾಜ್ಯ ಬಿಜೆಪಿ ಸಂಘಟಿಸಲು ಮರಳಿ ಬಂದ ಸಂತೋಷ,
ಬೆಂಗಳೂರು: ರಾಜ್ಯ ಬಿಟ್ಟು ಕೇಂದ್ರ ಮಟ್ಟದ ಬಿಜೆಪಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ ರಾಜ್ಯ ಸೇವೆಗೆ ಆಗಮಿಸಿದ್ದಾರೆ. ಹಾಗಾಗಿ ಬಿಜೆಪಿ ಅವರ 150 ಮಿಷನ್+ಗುರಿ ಸಾಕಾರಗೊಳ್ಳುವ ದಿಕ್ಕಿನಲ್ಲಿ ನಡೆಯುತ್ತಿದೆಯೇ? ಎಂಬ ಪ್ರಶ್ನೆಯಾಗಿದೆ. ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಜತೆ ಮುನಿಸಿಕೊಂಡಿದ್ದ ಇವರು, ಅಮಿತಾ ಶಾ ಅವರು ಸಂತೋಷ ಅವರ ಮನವೋಲಿಸಿದ್ದಾರೆ ಎಂದು ಮೂಲಗಳಿಂದ ತಿಳಿದು
ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲು ಶತಾಯುಗತಾಯ ಪ್ರಯತ್ನಿಸುತ್ತಿದೆ. ರಾಜ್ಯ ಬಿಜೆಪಿ ಸಂಘಟನೆಯಲ್ಲಿ ಸಂತೋಷ ಪಾತ್ರ ಅತ್ಯಂತ ಪ್ರಮುಖ ಎಂಬುದನ್ನು ಅರಿತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮನವೊಲಿಸಿದ್ದಾರೆ.
ಇನ್ನು ಕಳೆದ ಬಾರಿ ಬಿಜೆಪಿ ಸರ್ಕಾರ ರಚನೆ ಸಂಧರ್ಭದಲ್ಲಿ ಸಂತೋಷ ಅವರ ಪಾತ್ರ ಪ್ರಮುಖವಾದದ್ದು, ಅದನ್ನು ಅಲ್ಲಗಳೆಯುವಂತಿಲ್ಲ, ಆದ ಕಾರಣ ಕೇಂದ್ರದ ಪ್ರಮುಖ ನಾಯಕರು ಸಂತೋಷ ಅವರ ಮಹತ್ವವನ್ನು ಅರಿತಿದ್ದಾರೆ. ಬಿ.ಎಸ್ ಯಡಿಯೂರಪ್ಪ ಪ್ರತ್ಯೇಕ ಪಕ್ಷ ಕಟ್ಟಿದಾಗ ರಾಜ್ಯದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿ ಬಿಜೆಪಿಯಲ್ಲಿ ದೊಡ್ಡ ನಾಯಕರಾಗಿದ್ದ ಸಂತೋಷ ಅವರು ಬಿಎಸ್ ವೈ ಬಿಜೆಪಿಗೆ ಮರಳಿದ ನಂತರ ಎಂದರೆ 2014ರ ನಂತರ ಕೊಂಚ ನಗಣ್ಯರಾಗಿದ್ದರು.
ಇದರಿಂದ ಸಂತೋಷ ನೇರವಾಗಿ ಕೆ.ಎಸ್ ಈಶ್ವರಪ್ಪ ಅವರನ್ನು ಎತ್ತಿಕಟ್ಟಿ ಪಕ್ಷದಲ್ಲಿ ಒಡಕು ಇರುವುದನ್ನು ತೋರಿಸಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಮಧ್ಯಪ್ರವೇಶದಿಂದ ಆಗಾಗ ಯಡಿಯೂರಪ್ಪ -ಈಶ್ವರಪ್ಪ ನಡುವೆ ತೇಪೆ ಹಾಕುವ ಕಾರ್ಯ ಆಗುತ್ತಿತ್ತು. ಇದರಿಂದ ಬೇಸತ್ತ ಸಂತೋಷ ಕೇಂದ್ರ ಸೇವೆಯತ್ತ ತೆರಳಿದ್ದರು. ಆದರೆ ಅಮಿತ್ ಶಾ ಅವರ ಫಲವಾಗಿ ರಾಜ್ಯಕ್ಕೆ ಹಿಂದುರುಗಿ ಪಕ್ಷ ಸಂಘಟನೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
Comments