ಶೋಭಾ ಕರಂದ್ಲಾಜೆ ಆಗ್ತಾರ ಕೇಂದ್ರ ರೈಲ್ವೆ ಸಚಿವೆ ?!

ಕೇಂದ್ರದಲ್ಲಿ ಗಣೇಶ ಚತುರ್ಥಿಯಂದು ಸಚಿವ ಸಂಪುಟ ವಿಸ್ತರಣೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಆಧಾರದಲ್ಲಿ ರಾಜ್ಯ ನಾಯಕರಿಗೆ ಕೇಂದ್ರ ಮಂತ್ರಿಗಿರಿ ಲಭಿಸುವ ಭಾಗ್ಯವೊಂದು ಸೃಷ್ಠಿಯಾಗಿದೆ.
ಅಲ್ದೇ ಸಾಲು ಸಾಲು ರೈಲ್ವೇ ಅವಘಡದಿಂದ ನೈತಿಕ ಹೊಣೆ ಹೊತ್ತು ಸುರೇಶ್ ಪ್ರಭು ರಾಜಿನಾಮೆ ನೀಡಲು ಮುಂದಾಗಿದ್ದಾರೆ. ಒಂದೊಮ್ಮೆ ಸುರೇಶ್ ಪ್ರಭು ನೀಡಿದ ರಾಜಿನಾಮೆಯನ್ನು ಮೋದಿ ಅನುಮೋದನೆ ನೀಡಿದ್ದೇ ಆದರೆ ಶೋಭಗೆ ಲಕ್ ಖುಲಾಯಿಸ ಬಹುದು.
ಅಲ್ದೇ ರಾಜ್ಯದಲ್ಲಿ ಉಳಿದೆಲ್ಲಾ ಮುಖಂಡರಿಗಿಂತ ಒಂದು ಕೈ ಮೇಲಾಗೇ ಶೋಭಾ ಕರಂದ್ಲಾಜೆ ಕೈ ನಾಯಕರ ಬೆವರಿಳಿಸುತ್ತಿದ್ದು, ಶೋಭಗೆ ಮಂತ್ರಿಗಿರಿ ನೀಡಿದರೆ ರಾಜ್ಯದಲ್ಲಿ ಬಿಜೆಪಿಗೆ ಸಾಕಷ್ಟು ಮೈಲೇಜ್ ಬಂದೇ ಬರುತ್ತದೆ ಶೋಭ ಜೊತೆ ಕಾರ್ಯಕರ್ತರ ಒಡನಾಟ ಕೂಡ ಚೆನ್ನಾಗಿಯೇ ಇದೆ ಎಂಬ ಕಾತ್ರಿ ಮೇಲೆ ಕೇಂದ್ರ ಸಚಿವೆಯಾಗಿ ಮಾಡುವ ಸಾಧ್ಯತೆಗಳು ದಟ್ಟವಾಗಿದೆ.
Comments