ಜವಾಬ್ದಾರಿ ಹೊತ್ತ ಸುರೇಶ್ ಪ್ರಭು ರಾಜೀನಾಮೆ ?
ನವದೆಹಲಿ: ಸಾಲು ಸಾಲು ರೈಲು ಅಪಘಾತದ ಸುದ್ದಿ ಹಸಿಯಾಗಿರುವಾಗಲೇ ಉತ್ತರಪ್ರದೇಶದಲ್ಲಿ ಸಂಭವಿಸಿದ್ದ ರೈಲು ದುರಂತಕ್ಕೆ ಸಂಬಂಧಪಟ್ಟಂತೆ ರೈಲ್ವೇ ಸಚಿವ ಸುರೇಶ್ ಪ್ರಭು ಜವಾಬ್ದಾರಿ ಹೊತ್ತಿದ್ದಾರೆ. ಈ ಸಂಬಂಧ ಪ್ರಧಾನಿ ಮೋದಿ ಅವರಿಗೆ ರಾಜೀನಾಮೆ ಬಗ್ಗೆ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.

ಬುಧುವಾರ ಬೆಳಗಿನ ಜಾವ 2.30ಕ್ಕೆ ಸುಮಾರಿಗೆ ಅಜಮ್ ಗಢದಿಂದ ದಿಲ್ಲಿಗೆ ಹೊರಟಿದ್ದ ಕೈಫಿಯತ್ ರೈಲು ಉತ್ತರ ಪ್ರದೇಶದ ಆರೈಯ ಎಂಬಲ್ಲಿ ರೈಲು ಅಪಘಾತಕ್ಕೀಡಾಗಿತ್ತು. ರೈಲ್ವೇ ಕಾಮಗಾರಿಗಾಗಿ ನಿರ್ಮಾಣ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ಡಂಪರ್ ಗೆ ರೈಲು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಡಿಗೆ ರೈಲು ಡಿಕ್ಕಿಯಾದಾಗ 10 ಬೋಗಿಗಳು ಹಳಿ ತಪ್ಪಿದ್ದವು. ಅದರಲ್ಲಿ ಒಂದು ಬೋಗಿ ತಲೆಕೆಳಗಾಗಿ ಬಿದ್ದ ಪರಿಣಾಮ 10 ಮಂದಿ ಗಾಯಗೊಂಡಿದ್ದರು, ಅವರಲ್ಲಿ 4 ಜನರ ಸ್ಥಿತಿ ಗಂಭೀರವಾಗಿತ್ತು.
Comments