ಯಡಿಯೂರಪ್ಪಾರಿಗೆ ರಿಲೀಫ್ ಸೀಗುತ್ತೋ? ಇಲ್ಲವೋ?
ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷ್ ಸಂಬಂಧಿಸಿದಂತೆ ಬಿಎಸ್ ಯಡಿಯೂರಪ್ಪ ಅವರ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಲಿದೆ. ಒಂದು ವೇಳೆ ಇವತ್ತು ಬಿಎಸ್ ವೈ ಅವರಿಗೆ ತಾತ್ಕಲಿಕ ರಿಲೀಫ್ ಸಿಕ್ಕಿದ್ದಲ್ಲಿ ಸರ್ಕಾರದ ಎಲ್ಲಾ ತಂತ್ರಗಾರಿಕೆ ತಲೆಗೆಳಗಾಗಲಿದೆ. ಎಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಲಿದೆ. ಎಫ್ ಐಆರ್ ಗೆ ಮಧ್ಯಂತರ ತಡೆ ಕೋರಿ ಸಲ್ಲಿಸಿರುವ ಮನವಿ ಕುರಿತು ಇಂದು
ಬಿಎಸ್ ವೈ ಅವರಿಗೆ ತಾತ್ಕಲಿಕ ರಿಲೀಫ್ ಸೀಗುತ್ತೋ ಇಲ್ಲವೋ ಎಂಬುದು ಇಂದು ನಿರ್ಧಾರವಾಗಲಿದೆ. ಯಡಿಯೂರಪ್ಪ ಪರ ಹಿರಿಯ ವಕೀಲ ಸಿವಿ ನಾಗೇಶ್ ಹಾಗೂ ಎಸಿಬಿ ಪರ ಮಾಜಿ ಅಡ್ವೋಕೇಟ್ ಜನರಲ್ ರವಿ ವರ್ಮಾ ಕುಮಾರ್ ವಾದ ಮಂಡಿಸಲಿದ್ದಾರೆ. ಇಂದು ನಡೆಯಲಿರುವ ವಿಚಾರಣೆ ಯಡಿಯೂರಪ್ಪ ಪಾಲಿಗೆ ಅತ್ಯಂತ ಮಹತ್ವ ಪೂರ್ಣ ದಿನವಾಗಿದೆ.
Comments