ಹೆಚ್.ಸಿ. ಬಾಲಕೃಷ್ಣ 'ಕೈ' ಸೇರ್ಪಡೆಗೆ ಎ.ಮಂಜು ಬೆಂಬಲಿಗರ ವಿರೋಧ:ಡಿಕೆ ಸಮ್ಮುಖದಲ್ಲೇ ವಾಗ್ವಾದ
ನೆಲಮಂಗಲ: ಜೆಡಿಎಸ್'ನ ಬಂಡಾಯ ಶಾಸಕ ಹೆಚ್.ಸಿ. ಬಾಲಕೃಷ್ಣ ಕಾಂಗ್ರೆ'ಸ್ ಸೇರ್ಪಡೆಗೆ ಮಾಗಡಿ ತಾಲೂಕಿನ ಕಾಂಗ್ರೆಸ್ ಕಾಂಗ್ರೆಸ್ ಮುಖಂಡ ಎ. ಮಂಜು ಬೆಂಬಲಿಗರಿಂದ ವಿರೋಧ ವ್ಯಕ್ತ'ವಾಗಿದೆ.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನೆಲಮಂಗಲದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕಾರ್ಯ'ಕರ್ತರು 'ಕಾಂಗ್ರೆಸ್ ಪಕ್ಷದಿಂದ ಬಾಲಕೃಷ್ಣ ಅವರಿಗೆ ಹೈಕಮಾಂಡ್ ಏನಾದರು ಮುಂದಿನ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಿದರೆ ಖಂಡಿತ ಅವರು ಗೆಲ್ಲುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ದುಡಿದ ಎ.ಮಂಜು ಅವರಿಗೆ ಟಿಕೆಟ್ ನೀಡಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.
ಒಂದು ವೇಳೆ ಪಕ್ಷದಿಂದ ಬಾಲಕೃಷ್ಣ ಅವರಿಗೆ ಟಿಕೆಟ್ ನೀಡಿದರೆ ನಾವು ಯಾರು ಕೂಡ ಮತ ಹಾಕುವುದಿಲ್ಲ.ಪಕ್ಷದ ಮುಖಂಡರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳ ಬೇಕು. ಹಿಂದಿನಿಂದಲೂ ಕಾಂಗ್ರೆಸ್ ಕಾರ್ಯಕರ್ತರು ಬಾಲಕೃಷ್ಣರನ್ನು ಜೆಡಿಎಸ್ ಪಕ್ಷದ ಎದುರಾಳಿಯಾಗಿ ನೋಡಿದ್ದೇವೆ.ಈಗ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ನಾವು ಮತಹಾಕುವುದು ಹೇಗೆ ಎಂದು ನೂರಾರು ಕಾರ್ಯಕರ್ತರು ಡಿಕೆಶಿ ಅವರಿಗೆ ಪ್ರಶ್ನೆ ಮಾಡಿದರು.
ಜೇಡರಹಳ್ಳಿ ಕೃಷ್ಣಪ್ಪ ಮಾತನಾಡುತಿದ್ದಂತೆ ಕೆಲ ಕಾರ್ಯಕರ್ತರು ಮಾತಿನ ಚಕಮಕಿಗೆ ಮುಂದಾಗಿ ಸಭೆಯಿಂದ ಹೊರನಡೆದರು.
Comments