ವಿವಾದಕ್ಕೆ ಅಂತ್ಯ ಹಾಡಿದ ತಮಿಳುನಾಡು ರಾಜಕೀಯ!
ಚೆನ್ನೈ : ಹಲವು ದಿನಗಳಿಂದ ತಮಿಳುನಾಡಿನ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದ ೨ ಬಣಗಳು ಒಂದಾಗಿವೆ.ಆಡಳಿತ ಪಕ್ಷ ಅಣ್ಣಾ-ಡಿಎಂಕೆ ಕಡೆಗೂ ಒಂದಾಗಿದೆ. ಉಪಮುಖ್ಯಮಂತ್ರಿ ಆಗಿ ಮಾಜಿ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ನಂತರ ಆರೋಪ - ಪ್ರತ್ಯಾರೋಪ ಮಾಡುತ್ತಿದ್ದ ೨ ಬಣಗಳಾಗಿ ಬೇರ್ಪಟ್ಟಿದ್ದವು. ಶಶಿಕಲಾ ಅಕ್ರಮ ಆಸ್ತಿ ಪ್ರಕರಣದಲ್ಲಿ ೪ ವರ್ಷ ಜೈಲು ಶಿಕ್ಷೆಗೆ ಒಳಗಾದ ನಂತರ ತಮ್ಮ ಬಣದಿಂದ ಇ.ಪಳನಿಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿ ಪನ್ನೀರ್ ಸೆಲ್ವಂ ಅವರನ್ನು ಒಳಗೊಂಡ ಹಲವರನ್ನು ಉಚ್ಛಾಟಿಸಿದರು.
ರಾಜ್ಯಪಾಲರಾದ ಸಿ.ಹೆಚ್ ವಿದ್ಯಾಸಾಗರ್ ಅವರು ಪನ್ನೀರ್ ಸೆಲ್ವಂ ಅವರನ್ನು ಒಳಗೊಂಡ ಅವರ ಬಣದ ಮೂವರನ್ನು ಸಚಿವರನ್ನಾಗಿ ನೇಮಿಸಿದ್ದಾರೆ. ಹಿಂದಿನ ಎಲ್ಲಾ ಭಿನ್ನಾಭಿಪ್ರಾಯವನ್ನು ಮರೆತು ತಾವು ಅಮ್ಮನ ಮಕ್ಕಳಾಗಿ ಸೋದರರಾಗಿ ಇರುತ್ತೇವೆ ಎಂದು ಪನ್ನೀರ್ ಸೆಲ್ವಂ ತಿಳಿಸಿದ್ದಾರೆ.
Comments