ಹೊಸ ಬಾಂಬ್ ಸಿಡಿಸಲಿದ್ದಾರೆ ಹೆಚ್ ಡಿಕೆ ಇಂದು?

ಬೆಂಗಳೂರು : ಮೊದಲು ಯಡಿಯೂರಪ್ಪ ಈ ಕೇಸನ್ನು ಜೀವಂತವಾಗಿ ಇಟ್ಟುಕೊಂಡಿದ್ದರು. ಈ ಪ್ರಕರಣದಲ್ಲಿ ಏನು ಬಂಡವಾಳ ಇಲ್ಲ. ಆದರೂ ಈಗ ಕಾಂಗ್ರೆಸ್ ಇದನ್ನು ಜೀವಂತವಾಗಿ ಇಟ್ಟುಕೊಂಡಿದ್ದರು. ೧೦ ವರ್ಷಗಳ ಬಳಿಕ ನಡೆದಿರೋದು ಈಗ ಜೀವಂತ ಆಗಿದೆ ಎಂದು ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಜಂತಕಲ್ ಪ್ರಕರಣದ ಕುರಿತು ನಿನ್ನೆ ಮಾತನಾಡಿರುವ ಎಚ್ಡಿಕೆ ನಾಳೆ ಅಂದರೆ ಮಂಗಳವಾರದಂದು ನಾನು ಇದರ ಬಗ್ಗೆ ಸಂಪೂರ್ಣವಾಗಿ ಮಾತನಾಡಿಲಿದ್ದೇನೆ.ಸಿದ್ದರಾಮಯ್ಯ ಎಷ್ಟು ಡೋಂಗಿ ಎಂಬುದನ್ನು ಬಯಲಿಗೆಳೆಯುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಗಾದ್ರೆ ಎಚ್.ಡಿ ಕುಮಾರಸ್ವಾಮಿ ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಹೊಸ ಬಾಂಬ್ ಸಿಡಿಸುತ್ತಾರಾ ಎಂಬುದನ್ನು ಕಾದು ನೋಡ್ಬೇಕು.
ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಹೈಕೋರ್ಟ್ಜಾಮೀನು ನೀಡಿದೆ. ಆದ್ರೆ ೧೫ ದಿನಕ್ಕೊಮ್ಮೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯವು ಕುಮಾರಸ್ವಾಮಿ ಅವರಿಗೆ ಸೂಚಿಸಿದೆ.
Comments