ಪ್ರಧಾನಿ ಮೋದಿ 'ನಾಪತ್ತೆ' ಯಾಗಿದ್ದಾರೆ! ಹುಡುಕಿ ಕೊಡಿ?!
ನವದೆಹಲಿ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕೆಲ ದಿನಗಳ ಹಿಂದೆ ರಾಹುಲ್ ಕಾಣೆಯಾಗಿದ್ದಾರೆ ಎಂದು ಹರದಾಡುತ್ತಿದ್ದವು.ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್ಸ್ ಗಳನ್ನು ವಾರಾಣಾಸಿಯ ರಸ್ತೆ ಬದಿಗಳಲ್ಲಿ ಅಂಟಿಸಲಾಗಿದೆ.
ಪ್ರಧಾನಿ ಮೋದಿ ಅವರ ತವರು ಕ್ಷೇತ್ರ ವಾರಾಣಾಸಿಯಲ್ಲೇ ಇಂಥ ಪೋಸ್ಟರ್ಸ್ ಗಳು ಅಂಟಿಸಿರುವುದರ ಮೂಲಕ ಅಚ್ಚರಿ ಮೂಡಿಸಲಾಗಿದೆ. ಗೋಡೆ ಗೋಡೆಗಳ ಮೇಲೆ ಅಂಟಿಸಿದ ಫೊಟೋದಲ್ಲಿ ವಾರಣಾಸಿ ಸಂಸತರು ಕಾಣೆಯಾಗಿದ್ದಾರೆ ಎಂದು ಬರೆಯಲಾಗಿದ್ದು, ಇದರಲ್ಲಿ ಮೋದಿ ಫೊಟೋ ಕೂಡ ಇದೆ. ಪ್ರಧಾನಿ ಮೋದಿ ಅವರ ಬಗ್ಗೆ ಹೇಳುತ್ತಾ, ಅದ್ಯಾವ ದೇಶಕ್ಕೆ ನೀವೂ ಹೊರಟು ಹೋಗಿದ್ದೀರಿ ಎಂಬುದು ತಿಳಿಯದು. ಒಂದು ವೇಳೆ ಸಂಸದರು ಸಿಗದೇ ಇದ್ರೆ ನಾಪತ್ತೆಯಾಗಿದ್ದಾರೆ ಎಂಬ ದೂರು ನೀಡುವುದಾಗಿ ಬರೆಯಲಾಗಿದೆ.
ಈ ಪೋಸ್ಟರ್ ಗಳನ್ನು ಯಾರು ಅಂಟಿಸಿದ್ದಾರೆ ಎಂಬುದು ಇದುವರೆಗೂ ತಿಳಿದು ಬಂದಿಲ್ಲ. ಇದರ ಬಗ್ಗೆ ಜನರಲ್ಲಿ ಗೊಂದಲ ಮೂಡಿಸಿದೆ.
Comments