‘ಮಧುಮಗಳು ಚೆನ್ನಾಗಿದ್ದರೆ ಗಂಡುಗಳು ಹೆಚ್ಚಾಗಿ ಬರುತ್ತವೆ’- ಇಬ್ರಾಹಿಂ

ಬೆಂಗಳೂರು: ‘ಮಧುಮಗಳು ಚೆನ್ನಾಗಿದ್ದರೆ ಗಂಡುಗಳು ಹೆಚ್ಚಾಗಿ ಬರುತ್ತವೆ’ ಎಂಬುದಕ್ಕೆ ವಿಶೇಷತೆ ಏನು ಇಲ್ಲ ಎಂದು ಹೇಳುವ ಮೂಲಕ ಹಿರಿಯ ಕಾಂಗ್ರೆಸ್ಸಿಗ ಸಿಎಂ ಇಬ್ರಾಹಿಂ ತಮಗೆ ಜೆಡಿಎಸ್ ಸೇರುವುದಕ್ಕೆ ಆಹ್ವಾನ ಬಂದಿದ್ದನ್ನು ಪರೋಕ್ಷವಾಗಿ ಒಪ್ಪಿಕೊಂಡರು.
ಜೆಡಿಎಸ್ ಸೇರಲು ಮುಂದಾಗಿದ್ದಕ್ಕಾಗಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಲಾಯಿತೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅವರ ಜತೆಗೆ ನಿನ್ನೆ ಮಾತುಕತೆ ನಡೆಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ನನ್ನ ಹಳೆಯ ಗೆಳೆತನ ಇದೆ. ಅವರೊಂದಿಗೆ
ನಾನು ಯಾವತ್ತು ಮುನಿಸಿಕೊಂಡಿಲ್ಲ, ಅವರು ಆಗಾಗ ನನಗೆ ಒಳ್ಳೆಯ ಸಲಹೆಗಳನ್ನು ನೀಡುತ್ತಿರುತ್ತಾರೆ ಎಂದು ತಿಳಿಸಿದರು. ಕಾಂಗ್ರೆಸ್ ನ್ನು ಮರಳಿ ತರುವ ಸಂಕಲ್ಪ ಮಾಡಲಾಗಿದೆ.ಮುಖ್ಯಮಂತ್ರಿಗಳಿಗೆ ಹೆಚ್ಚು ಜವಾಬ್ದಾರಿ ಇದೆ. ಈ ವೇಳೆಯಲ್ಲಿ ಯಾವುದೇ ಆಮಿಷಕ್ಕೂ ನಾನು ವಿಚಲಿತನಾಗುವುದಿಲ್ಲ, ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದರು.
Comments