ಡಿಕೆಶಿ, ಸಿಎಂ ಸಿದ್ದರಾಮಯ್ಯ, ಬಿಎಸ್ ವೈ ಒಂದೇ ವರ್ಗದವರು : ನಮ್ಮದು 125 ಮಿಷನ್

19 Aug 2017 9:37 PM | Politics
759 Report

ಅಥಣಿ: ಸಚಿವ ಡಿಕೆಶಿ, ಸಿಎಂ ಸಿದ್ದರಾಮಯ್ಯ, ಬಿಎಸ್ ವೈ ಒಂದೇ ವರ್ಗಕ್ಕೆ ಸೇರಿದವರು ಇವರು ರಾಜ್ಯದ ಜನರ ದಿಕ್ಕು ತಪ್ಪಿಸುವಲ್ಲಿ ನಿಸ್ಸೀಮರು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮೂವರು ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದರು

ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಡಿಕೆಶಿ, ಸಿಎಂ ಸಿದ್ದರಾಮಯ್ಯ, ಬಿಎಸ್​ವೈ ಅವರು ರಾಜಕೀಯವಾಗಿ ಕುಮಾರಸ್ವಾಮಿಯನ್ನು ಮುಗಿಸಲು ಪ್ರಯತ್ನಿಸಿದ್ದರು. ಆದರೆ ಕುಮಾರಸ್ವಾಮಿಯನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಇದೇ ಸಂದರ್ಭದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆ ವಿಚಾರವಾಗಿ ಮಾತನಾಡಿದ ಅವರು, ಧರ್ಮದ ವಿಚಾರದಲ್ಲಿ ರಾಜಕಾರಣಿಗಳು ಮೂಗು ತೂರಿಸುವುದು ತಪ್ಪು. ಅಲ್ಲದೆ ಇದು ಲಿಂಗಾಯತ ಸಮುದಾಯದ ಸ್ವಾಮೀಜಿ, ಮುಖಂಡರಿಗೆ ಬಿಟ್ಟ ವಿಚಾರ ಎಂದು ತಿಳಿಸಿದರು.

ಜೆಡಿಎಸ್ ರೆಬಲ್ ಶಾಸಕರ ಕ್ಷೇತ್ರದಲ್ಲಿ ಗೆಲ್ಲುವ ಶಪಥ ಮಾಡಿದ್ದೇವೆ. ಶಪಥ ಮಾಡುವುದಷ್ಟೇ ಅಲ್ಲ ಗೆಲ್ಲುವ ನಿಟ್ಟಿನಲ್ಲಿ ಸಕಲ ಪ್ರಯತ್ನ ಮಾಡುತ್ತೇವೆ. ಜೆಡಿಎಸ್​ನಿಂದ 7 ಶಾಸಕರ ಹೊರತಾಗಿ ಪಕ್ಷ ತೊರೆಯುವ ಪ್ರಸ್ತಾಪ ಇಲ್ಲ. ಜೆಡಿಎಸ್'ನಿಂದ ಮಿಷನ್ 125 ಗೆಲ್ಲುವುದು ನಮ್ಮ ಗುರಿ ಎಂದು ತಿಳಿಸಿದ್ದಾರೆ.

Courtesy: Suvarnanews

Comments