ಸಿಎಂ ವಿರುದ್ಧ ಮತ್ತೆ ಏಕವಚನ ಪ್ರಯೋಗಿಸಿದ ಯಡಿಯೂರಪ್ಪ

19 Aug 2017 1:13 PM | Politics
685 Report

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮತ್ತೆ ಏಕವಚನ ಪ್ರಯೋಗ ಮಾಡಿ ತರಾಟೆಗೆ ತೆಗೆದುಕೊಂಡರು.

ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು, "ಅಮಿತ್‌ ಶಾ ಅವರು ಕೇಂದ್ರ ಸರ್ಕಾರ ಕೊಟ್ಟ ಹಣದ ಲೆಕ್ಕ ಕೇಳಿದಾಗ ಕೊಡಬೇಕಾದುದು ನಿನ್ನ ಕರ್ತವ್ಯ, ಅದರ ಬದಲು ಅವರಾರು ಎಂದು ಕೇಳುತ್ತೀಯಾ? ಯಾವುದೇ
ಪ್ರಜೆಗೆ ಲೆಕ್ಕ ಕೇಳುವ ಸಂಪೂರ್ಣ ಸ್ವಾತಂತ್ರ್ಯಇದೆ. ಜನ ಕೊಟ್ಟ ಹಣವನ್ನು ಲೂಟಿ ಮಾಡಲು ಅಲ್ಲಿ (ಮುಖ್ಯಮಂತ್ರಿ ಸ್ಥಾನ) ನಿನ್ನನ್ನು ಕೂರಿಸಿಲ್ಲ' ಎಂದು ಕಿಡಿ ಕಾರಿದರು. 

"ಮರಳು ದಂಧೆಯಲ್ಲಿ ಮಹದೇವಪ್ಪ ಮಗ, ನಿನ್ನ ಮಗ ಹಗರಣಗಳಲ್ಲಿ ಸಿಲುಕಿಕೊಂಡಿರುವುದು ನಿಜ ತಾನೆ? ಅದೇ ರೀತಿ ಅಕ್ರಮವಾಗಿ ಕೊಟ್ಟ ವಾಚ್‌ ಕಟ್ಟಿಕೊಂಡು ನಂತರ ವಿಧಾನಸೌಧದಲ್ಲಿ ಇಟ್ಟಿದ್ದೀಯಾ. ಯಾರು ಕೊಟ್ಟ ವಾಚ್‌ ಅದು? ಹಗರಣದ ಸರಮಾಲೆಯೇ ನಿನ್ನ ಕುತ್ತಿಗೆ ಸುತ್ತಿಕೊಂಡಿರಬೇಕಾದರೆ ಬಿಜೆಪಿ ಮುಖಂಡರನ್ನು ಬೆದರಿಸುತ್ತೀಯಾ' ಎಂದು ಆಕ್ರೋಶ ವ್ಯಕ್ತಪಡಿಸಿದರು.

Courtesy: udayavani

Comments