ಎಷ್ಟೋ ದಿನಗಳ ಬಳಿಕ ನಿದ್ರೆಯಿಂದ ಬಿಜೆಪಿ ಎದ್ದು, ಪ್ರತಿಭಟನೆ ಮಾಡ್ತಿದೆ- ಡಿಕೆಶಿ
ಬೆಂಗಳೂರು: ಎಷ್ಟೋ ದಿನದ ಮೇಲೆ ನಿದ್ರೆಯಿಂದ ಬಿಜೆಪಿ ಎದ್ದಿದೆ. ಈಗ ಬಿಜೆಪಿಯವರು ರಾಜೀನಾಮೆ ಕೇಳುತ್ತಿದ್ದಾರೆ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ಕಮಲ ನಾಯಕ ಪ್ರತಿಭಟನೆಯನ್ನು ವ್ಯಂಗ್ಯ ವಾಡಿದ್ದಾರೆ.
ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಬಿಜೆಪಿ ಅವರು ಹೋರಾಟ ಮಾಡುವುದು ಬಹಳ ಖುಷಿ. ನಾನು ಯಾವುದೇ ಭ್ರಷ್ಟಾಚಾರ ಮಾಡಿದ್ದೇನೆ ಎನ್ನುವುದನ್ನು ಅವರು ಹೇಳಬೇಕು, ಅವರ ಬಳಿ ಇರೋ ಬತ್ತಳಿಕೆಗಳನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.ನನ್ನ ಮೇಲೆ ಐಟಿ ರೇಡ್ ಆಗಿದೆ. ಅದಕ್ಕೆ ಕಾನೂನು ಚೌಕಟ್ಟು ಇದೆ. ಅಮಿತ್ ಶಾ, ಯಡಿಯೂರಪ್ಪ ಐಟಿ ಅಧಿಕಾರಿಯಲ್ಲ,ಬಿಜೆಪಿ ಅವರು ನನ್ನ ಭ್ರಷ್ಟಾಚಾರ ಸಾಬೀತು ಮಾಡಿದರೆ ಆಗ ರಾಜೀನಾಮೆ ಕೇಳಲು ಹಕ್ಕಿದೆ ಎಂದರು.
ರಮೇಶ್ ಜಾರಕಿಹೊಳಿ ಗೋವಿಂದ್ ಜಾರಕಿಹೊಳಿ, ಗೋವಿಂದ್ ರಾಜು, ಸೀತಾರಾಂ , ಶಿವಶಂಕರಪ್ಪ ಮಗನ ಮನೆ ಮೇಲೆ ರೇಡ್ ಆಗಿ ಎಷ್ಟು ದಿನ ಆಯ್ತು. ಯಾಕೆ ಅವರ ವಿರುದ್ಧ ಪ್ರತಿಭಟನೆ ಮಾಡಿಲ್ಲ. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ನನ್ನ ಬಳಿಯ ಅಸ್ತ್ರಗಳು ಇವೆ. ಬಿಜೆಪಿ ಸರ್ಕಾರದ ಅವಧಿಯ ಭ್ರಷ್ಟಾಚಾರದ ದಾಖಲೆಗಳು, ಮಾಹಿತಿಗಳು ಬೇಡ ಅಂದ್ರು ಜನ ತಂದು ಕೊಡುತ್ತಿದ್ದಾರೆ. ನಮ್ಮ ಮೇಲೆ ಯುದ್ಧ ಮಾಡುವವರ ವಿರುದ್ಧ ನಾನು ಯುದ್ಧ ಮಾಡಲು ರೆಡಿಯಾಗಿದ್ದೇನೆ ಎಂದರು.
Comments