Report Abuse
Are you sure you want to report this news ? Please tell us why ?
‘ಕಳಸಾ–ಬಂಡೂರಿ: ಪ್ರಧಾನಿ ಮೌನ’

19 Aug 2017 9:54 AM | Politics
514
Report
ಬೈಲಹೊಂಗಲ: ‘ಕಳಸಾ– ಬಂಡೂರಿ ನಾಲಾ ಜೋಡಣೆ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಬೇಕೆಂದು ಹಲವು ಬಾರಿ ಕೇಳಿಕೊಂಡಿದ್ದರೂ ಪ್ರಧಾನಿ ನರೇಂದ್ರ ಮೋದಿ ಈ ವಿಷಯದಲ್ಲಿ ಮೌನ ವಹಿಸಿದ್ದಾರೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಶುಕ್ರವಾರ ಇಲ್ಲಿ ಟೀಕಿಸಿದರು.
ಪಟ್ಟಣದಲ್ಲಿ ನಡೆದ ಜೆಡಿಎಸ್‌ನ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಕಳಸಾ- ಬಂಡೂರಿ, ಕಾವೇರಿ ನೀರಿನ ವಿವಾದ ಕುರಿತು ಹಲವು ಬಾರಿ ಮೋದಿ ಜತೆ ಚರ್ಚಿಸಿದ್ದೇನೆ. ಆದರೆ ಅವರು ಏನೂ ಹೇಳುತ್ತಿಲ್ಲ’ ಎಂದರು.
Courtesy:
prajavani
Comments