ಕೆಜೆ ಜಾರ್ಜ್ ರಿಂದ ಸಬ್ ಅರ್ಬನ್ ರೈಲಿಗೆ ಚಾಲನೆ
ಬೆಂಗಳೂರು: ಬೆಂಗಳೂರು ಸಂಚಾರ ದಟ್ಟಣೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಸಬ್ ಅರ್ಬನ್ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭುರವರು ವಿಡಿಯೋ ಕಾನ್ಫರೆನ್ಸ್ ಮೂಲಕ ಶುಕ್ರವಾರದಂದು ಚಾಲನೆ ನೀಡಿದರು.
ಬೆಂಗಳೂರಿನಲ್ಲಿ ಸಬ್ ಅರ್ಬನ್ ರೈಲು ಸಂಚಾರ ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್‌ವರೆಗೆ ಸಬ್ ಅರ್ಬನ್ ರೈಲಿನ ಜೊತೆಗೆ ಒಟ್ಟು ರಾಜ್ಯದ ವಿವಿಧ ರೈಲ್ವೆ ಯೋಜನೆಗಳಿಗೆ ನವದೆಹಲಿಯ ರೈಲ್ವೆ ಭವನದಿಂದ ಸುರೇಶ್ ಪ್ರಭು ಹಸಿರು ನಿಶಾನೆ ತೋರಿಸಿದರು. ಉಪನಗರಗಳ ನಡುವೆ ರೈಲು ಮಾರ್ಗ ನಿರ್ಮಾಣ ಮಾಡುವ ಸಬ್ ಅರ್ಬನ್ ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರವು ಕಳೆದ ವರ್ಷ ಗ್ರೀನ್ ಸಿಗ್ನಲ್ ನೀಡಿತ್ತು.
ಮಂಡ್ಯ-ಕೆಂಗೇರಿ, ತುಮಕೂರು, ಯಶವಂತಪುರ, ವೈಟ್‌ಫೀಲ್ಡ್ -ಬೈಯಪ್ಪನಹಳ್ಳಿ, ನಡುವೆ ಸಬ್‌ಅರ್ಬನ್ ರೈಲ್ವೆ ಯೋಜನೆ ಜಾರಿಗೆ ತರುವ ಉದ್ದೇಶವಿದೆ. ಮೊದಲ ಹಂತದಲ್ಲಿ ವೈಟ್‌ಫೀಲ್ಡ್ -ಬೈಯಪ್ಪನಹಳ್ಳಿ ಜಾರಿಗೆ ಬರುತ್ತಿದೆ.
ಸಬರ್ ಬನ್ ರೈಲು ಸಂಪೂರ್ಣ ಮಾಡಬೇಕಾದರೆ 10 ಸಾವಿರ ಕೋಟಿ ರೂ. ಅಗತ್ಯವಾಗಿದೆ. ಅದಕ್ಕಾಗಿ ಪ್ರತ್ಯೇಕ ಲೇನ್ ಹಾಕಬೇಕಾಗುತ್ತದೆ. ಆದರೆ, ಹಾಲಿ ಲೇನ್ ಗಳನ್ನು ಬಳಸುವಂತೆ ಸದ್ಯಕ್ಕೆ ಸೂಚಿಸಲಾಗಿದೆ.
Comments