ನಮ್ಮ ಪಾಲಿನ ಹಣ ಎಲ್ಲಿಗೆ ಹೋಯ್ತು. ಸಿಎಂ ಪ್ರಶ್ನೆ?
ಬೆಂಗಳೂರು: ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಬರಬೇಕಾಗಿದ್ದ 10 ಸಾವಿರ ಕೋಟಿ ತೆರಿಗೆ ಪಾಲಿನ ಹಣ ಇನ್ನೂ ಯಾಕೆ ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ಅಮಿತ್ ಶಾ ವಿರುದ್ಧ ಗುಡುಗಿದ್ದಾರೆ. ಈ ವೇಳೆ ಅಮಿತ್ ಶಾ ಅವರಿಗೆ ಪ್ರಶ್ನೆ ಮಾಡಿರುವ ಸಿಎಂ ಸಿದ್ದರಾಮಯ್ಯ, ಪ್ರಶ್ನಿಸಿದರು
ಕೇಂದ್ರದಿಂದ ಕೊಟ್ಟ ಅನುದಾನ ವನ್ನು ಕರ್ನಾಟಕ ಸರ್ಕಾರ ಯಾಕೆ ಬಳಸಿಕೊಂಡಿಲ್ಲ ಎಂದು ಅಮಿತ್ ಶಾ ನಿನ್ನೆ ಕೇಳಿದ ಪ್ರಶ್ನೆಗೆ ಇಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರ ಕೊಟ್ಟಿರುವ ಹಣವನ್ನು ಖರ್ಚು ಮಾಡಿಲ್ಲ ಅಂತೀರಲ್ಲ, ಅಮಿತ್ ಶಾ ಅವರೇ, ನೀವ್ಯಾರಿ ನಮ್ಮ ಲೆಕ್ಕ ಕೇಳೋಕೆ, ನಾವು
ಜನರಿಗೆ ಉತ್ತರ ಕೊಡುತ್ತೇವೆ ಹೊರೆತು, ನಿಮಗಲ್ಲ, ಎಂದು ಗುಡುಗಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಇಂದಿರಾ ಕ್ಯಾಂಟೀನ್ ಉದ್ಘಾಟನೆ ಬಳಿಕ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಉಗ್ರ
ಭಾಷಣ ಮಾಡಿದರು. ಅಮಿತ್ ಶಾ ಅವರಿಗೆ ಕ್ರಿಮಿನಲ್ ತಂತ್ರಗಾರಿಕೆ ಬರುತ್ತದೆಯೇ ಹೊರೆತು, ನ್ಯಾಯಯುತ ತಂತ್ರಗಾರಿಕೆ
ಮಾಡಲು ಬರುವುದಿಲ್ಲ ಎಂದರು.
Comments