ಜೆಡಿಎಸ್ ಶಾಸಕರು ಕೈ ಸೇರೋದು ಪಕ್ಕಾ ಆಗುತ್ತಾ!?
ಬೆಂಗಳೂರು: ಜೆಡಿಎಸ್ ಪಕ್ಷದಿಂದ ಮಾನಸಿಕವಾಗಿ ದೂರವಾಗಿರುವ ಬಂಡಾಯ ಶಾಸಕರು ಕೈ ಸೇರೋದು ಪಕ್ಕಾ ಆಗುತ್ತಾ ಎಂಬ ಕುತೂಹಲ ಮೂಡಿದೆ. ಈಗಾಗ್ಲೇ ಬುಧುವಾರ ರಾತ್ರಿ ಜೆಡಿಎಸ್ ಶಾಸಕರ ಜತೆಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಜತೆಗೆ ಮಾತುಕತೆ ನಡೆಸಲಾಗಿದೆ. ಜೆಡಿಎಸ್ ಶಾಸಕರು ಅವರದೇ ಆದ ಕ್ಷೇತ್ರದಲ್ಲಿ ಬಲಿಷ್ಠರಾಗಿದ್ದಾರೆ. ಇವರು ಬರುವುದರಿಂದ ಕಾಂಗ್ರೆಸ್ ಗೆ ಬಲ ಬಂದತಾಗುತ್ತದೆ.
ಜೆಡಿಎಸ್ ನ 7 ಶಾಸಕರು ಕಾಂಗ್ರೆಸ್ ಗೆ ಸೇರಲು ತೀರ್ಮಾನ ಕೈಗೊಂಡಿದ್ದಾರೆ. ಮುಂದೆ ಯಾರು ಸೇರುತ್ತಾರೆ ಎಂಬುದನ್ನು
ನೋಡಬೇಕು. ಬಿಜೆಪಿ ಮುಳುಗುತ್ತಿರುವ ಹಡಗು ಇದ್ದಂತೆ, ಆ ಪಕ್ಷಕ್ಕೆ ನಮ್ಮಿಂದ ಅಲ್ಲಿಗೆ ಯಾರು ಹೋಗುವುದಿಲ್ಲ ಎಂದು
ಸಿಎಂ ಸಿದ್ದರಾಮಯ್ಯ ಈಗಾಗ್ಲೇ ಸ್ಪಷ್ಟನೆ ನೀಡಿದ್ದಾರೆ.
ಎಲ್ಲವು ಅಂದುಕೊಂಡತೆ ನಡೆದರೆ ಇವತ್ತು 7 ಜೆಡಿಎಸ್ ಬಂಡಾಯ ಶಾಸಕರು ಕಾಂಗ್ರೆಸ್ ಗೆ ಸೇರಲು ಮೂಹುರ್ತ ಫಿಕ್ಸ್ ಆಗಿದೆ ಎಂದು
ಹೇಳಲಾಗುತ್ತಿದೆ. ಜೆಡಿಎಸ್ ಶಾಸಕರೆಲ್ಲರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಲ್ ಗಾಂಧಿ ಅವರ ಬಳಿ ಕರೆದುಕೊಂಡು ಹೋಗಿ
ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ , ಡಿಸೆಂಬರ್ ಹಾಗೂ ಜನವರಿಯಲ್ಲಿ ಜೆಡಿಎಸ್ ಶಾಸಕರು ಕಾಂಗ್ರೆಸ್
ಸೇರಲಿದ್ದಾರೆ ಎಂದು ತಿಳಿಸಿದ್ದಾರೆ.
Comments