ಕೊಟ್ಟಮಾತಿನತ್ತೆ ನಡೆದ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಿಂಗಳ ಹಿಂದೆ ದೇಶದ ಜನರಿಗೆ ನೀಡಿದ್ದ ಮಾತನ್ನು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಉಳಿಸಿಕೊಂಡರು.
ಮೋದಿ ಅವರು ಈ ಸಲ 56 ನಿಮಿಷಗಳಲ್ಲಿ ತಮ್ಮ ಭಾಷಣ ಮುಗಿಸಿದರು. ಹಿಂದಿನ ಮೂರು ಭಾಷಣಗಳಿಗೆ ಹೋಲಿಸಿದರೆ, ಇದು ಅವರು ಮಾಡಿರುವ ಸಣ್ಣ ಭಾಷಣ. ಕಳೆದ ವರ್ಷ 96 ನಿಮಿಷಗಳ ದೀರ್ಘ ಭಾಷಣವನ್ನು ಅವರು ಮಾಡಿದ್ದರು.
ಮೊದಲ ವರ್ಷ ಅಂದರೆ, 2014ರಲ್ಲಿ 65 ನಿಮಿಷ ಅವರು ಮಾತನಾಡಿದ್ದರು. ಮರು ವರ್ಷ ಈ ಅವಧಿ 86 ನಿಮಿಷಕ್ಕೆ ಹೆಚ್ಚಿತ್ತು.
ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು 32ರಿಂದ 50 ನಿಮಿಷಗಳವರೆಗೆ ಮಾತನಾಡುತ್ತಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣಗಳು 25ರಿಂದ 35 ನಿಮಿಷಗಳಿಗಿಂತ ಮೀರುತ್ತಿರಲಿಲ್ಲ.
ಜವಾಹರಲಾಲ್ ನೆಹರೂ ಅವರು ಮೊದಲ ಸ್ವಾತಂತ್ರ್ಯ ದಿನಾಚರಣೆಯಂದು 72 ನಿಮಿಷ ಮಾತನಾಡಿದ್ದರು.
ಸ್ವಾತಂತ್ರ್ಯ ದಿನದಂದು ತಾವು ಮಾಡುವ ಭಾಷಣ ಸ್ವಲ್ಪ ದೀರ್ಘವಾಗುತ್ತಿದೆ ಎಂದು ದೂರುಗಳು ಬಂದಿವೆ. ಹಾಗಾಗಿ ಈ ಬಾರಿ ದೀರ್ಘ ಭಾಷಣ ಮಾಡುವುದಿಲ್ಲ ಎಂದು ಜುಲೈ ತಿಂಗಳ 'ಮನದ ಮಾತು' ರೇಡಿಯೊ ಕಾರ್ಯಕ್ರಮದಲ್ಲಿ ಮೋದಿ ಅವರು ಹೇಳಿದ್ದರು.
Comments