ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪ್ರಯಾಣದ ವೇಳೆ ಭದ್ರತಾ ವೈಫಲ್ಯ
ಬೆಂಗಳೂರು:ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಯಾಣದ ವೇಳೆ ಭದ್ರತಾ ವೈಫಲ್ಯ ಕಂಡು ಬಂದಿದೆ. ನಿಯಮ ಉಲ್ಲಂಘಿಸಿ ಎಸ್ಕಾರ್ಟ್ ವಾಹನದ ಜೊತೆ ಖಾಲಿ ಬರಬೇಕಿದ್ದ ಬದಲಿ ಬುಲೆಟ್ ಪ್ರೂಫ್ ವಾಹನದಲ್ಲಿ ಮೂರು ಮಂದಿಯನ್ನು ಚಾಲಕ ಕರೆ ತಂದಿದ್ದಾನೆ.
ಅಮಿತ್ ಶಾ ಪರ್ಸನಲ್ ಕ್ಯಾಮೆರಾಮನ್ ಮತ್ತು ಬೆಂಗಳೂರಿನ ಇಬ್ಬರು ಬಿಜೆಪಿ ಮುಖಂಡರನ್ನು ಬದಲಿ ವಾಹನದಲ್ಲಿ ಚಾಲಕ ಕರೆ ತಂದಿದ್ದಾನೆ. ಹೀಗಾಗಿ ಚಾಲಕನಿಗೆ ಎಸಿಪಿ ಗ್ರೇಡ್ನ ಅಧಿಕಾರಿ ತರಾಟೆಗೆ ತೆಗೆದುಕೊಂಡ್ರು.
ಯಾರ ಅನುಮತಿ ಪಡೆದು ವಾಹನದಲ್ಲಿ ಮೂರು ಮಂದಿಯನ್ನು ಕರೆ ತಂದೆ ಎಂದು ಚಾಲಕನನ್ನು ವಿಐಪಿ ಭದ್ರತಾ ಅಧಿಕಾರಿ ಸೂರ್ಯವಂಶಿ ಪ್ರಶ್ನಿಸಿದ್ರು. ಬೆಂಗಳೂರು ನಗರ ವಿಐಪಿ ಭದ್ರತಾ ಅಧಿಕಾರಿ ಸೂರ್ಯವಂಶಿ ಮೂರು ದಿನಗಳ ಕಾಲ ಅಮಿತ್ ಷಾಗೆ ಭದ್ರತಾ ಉಸ್ತುವಾರಿ ವಹಿಸಿಕೊಂಡಿದ್ದರು.
Comments