ಬಿಎಸ್'ವೈಗೆ 'ಬೆಚ್ಟಿ' ಮೈಕ್ ಬಿಟ್ಟ ಅಶೋಕ್!: ಆಗಿದ್ದೇನು ಗೊತ್ತಾ?

ಬೆಂಗಳೂರು(ಆ.13): ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ದಿಟ್ಟಿಸಿದ ಪರಿಗೆ ಭಾಷಣ ಮಾಡಲು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರು ಮೈಕ್ ಬಿಟ್ಟುಕೊಟ್ಟ ಪ್ರಸಂಗ ಜರುಗಿತು.
ನಗರದ ಖಾಸಗಿ ಹೋಟೆಲ್'ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸನ್ಮಾನ ಮಾಡಿದ ಬಳಿಕ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಸನ್ಮಾನ ಮಾಡುವ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಪ್ರಕಟಿಸಿದರು. ಆದರೆ, ಅದಕ್ಕೂ ಮುನ್ನವೇ ಯಡಿಯೂರಪ್ಪ ಭಾಷಣ ಮಾಡಲು ಆಗಮಿಸಿದರು. ಮೂವರಿಗೆ ಸನ್ಮಾನ ಮಾಡಬೇಕಿದ್ದು, ತಾವು ಸನ್ಮಾನ ಸ್ವೀಕರಿಸಿ ಎಂದು ಅಶೋಕ್ ಅವರು ಯಡಿಯೂರಪ್ಪ ಬಳಿ ಮನವಿ ಮಾಡಿದರು. ಆದರೆ, ಇದಕ್ಕೆ ಕ್ಯಾರೆ ಎನ್ನದೆ ಯಡಿಯೂರಪ್ಪ ಅವರು ಸನ್ಮಾನ ಸ್ವೀಕರಿಸಲಿಲ್ಲ.
ಅಶೋಕ್ ಅವರು ಮತ್ತೊಮ್ಮೆ ಮನವಿ ಮಾಡಿದಾಗ ಅವರನ್ನೇ ದಿಟ್ಟಿಸಿ ನೋಡಿದರು. ಆಗ ಅವರ ನೋಟವನ್ನು ಎದುರಿಸಲಾಗದೆ ಅಶೋಕ್ ಅವರು ಮೈಕ್ ಬಿಟ್ಟುಕೊಟ್ಟು ತಮ್ಮ ಆಸನಕ್ಕೆ ತೆರಳಿ ಆಸೀನರಾದರು.
Comments