ಉಪೇಂದ್ರ ಹೊಸ ಪಕ್ಷ ಕಟ್ಟುವ ಹಿಂದೆ ಚಾಣುಕ್ಯರ ಕೈವಾಡವಿದೆಯಾ ?

ಬೆಂಗಳೂರು: ನಮ್ಮ ದೇಶ ಪ್ರಜಾಪ್ರಭುತ್ವ ದೇಶ. ರಾಜಕೀಯ ವ್ಯವಸ್ಥೆ ಬಗೆಗೆ ವಾಕರಿಕೆ ಹುಟ್ಟಿಸುತ್ತಿರುವ ಕಾಲ ಇದು.ರಾಜಕಾರಣದಲ್ಲಿ ದುಡ್ಡಿನ ಹೊಳೆ, ಹೆಂಡ ಹರಿದಾಡುತ್ತೆ ಎಂಬ ಮಾತಿದೆ. ಅಂಥದ್ದರಲ್ಲಿ ಕನ್ನಡದ ನಟರೊಬ್ಬರು ರಾಜಕೀಯಕ್ಕೆ ಲಗ್ಗೆ ಇಡಲು ಹೊರಟಿದ್ದಾರೆ. ದೇಶದಲ್ಲಿ ರಾಜಕೀಯ ವಿಷಯ ಜನ ಸಾಮಾನ್ಯರ ಮೇಲೆ ಪ್ರಭಾವ ಬೀರುತ್ತಿದೆ. ವೋಟು ರಾಜಕಾರಣ, ಅಧಿಕಾರದ ಪೈಪೋಟಿ ನೋಡಿ, ದೂರ ನಿಂತು ನೋಡುವ ಜನರು ಹಿಡಿಶಾಪ ಹಾಕುತ್ತಿದ್ದರು
ಜಾತಿ, ಧರ್ಮ, ದುಡ್ಡು ಫೇಮಸ್ ಇರುವರೆಗೂ ವೋಟ್ ಹಾಕಲಾಗುತ್ತದೆ. ವೋಟ್ ಬ್ಯಾಂಕ್ ರಾಜಕೀಯ ನಮಗೇನು ಬೇಕಾಗಿಲ್ಲ. ಜನರ ಜತೆ ಕೆಲಸ ಮಾಡುವ ಅನಿವಾರ್ಯತೆ ಇದೆ. ಟೆಕ್ನಾಲಜಿ ಇದೆ. ಖಂಡಿತ ನಾವು ಜನರನ್ನುತಲುಪಬಹುದು, ಸೋಲು ಗೆಲುವು ಮುಖ್ಯವಲ್ಲ, ಬನ್ನಿ ಎಲ್ಲರ ಇತಿಹಾಸ ನಿರ್ಮಿಸೋಣ ಎಂದು ಉಪೇಂದ್ರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಟ ಉಪೇಂದ್ರ ರಾಜಕೀಯ ಕುರಿತು ಹೇಳಿದ್ದು ಆಗಿದೆ. ಆದರೆ ಇವರು ಹೀಗೆ ಹೇಳಲು ಕಾರಣವೇನು, ರಾಜ್ಯದಲ್ಲಿ ನಡೆಯುವತ್ತಿರುವ ಎಲ್ಲಾ ರಾಜಕೀಯ ವಿದ್ಯಮಾನಗಳು ಕುತೂಹಲ ಸೂಚಿಸುತ್ತಿವೆ. ಒಂದು ಕಡೆ ಉಪೇಂದ್ರ ಅವರು ಹೇಳಿರುವ ಮಾತುಗಳು ಅಚ್ಚರಿ ಮೂಡಿಸುತ್ತವೆ. ಮತ್ತೊಂದೆಡೆ ಇವರು ಹೀಗೆ ಹೇಳಲು ಕಾರಣವಾದ್ರು ಏನು ಎಂಬುದಕ್ಕೆ ಬಹುಶಃ ಖಚಿತತೆ ಸದ್ಯಕ್ಕೆ ಏನು ಎಂಬುದು ತಿಳಿದಿಲ್ಲ.
ಹೊಸ ಪಕ್ಷ ಕಟ್ಟುವ ಸೂಚನೆ ನೀಡಿರುವ ಉಪೇಂದ್ರ ಅವರು ಪಕ್ಷ ಕಟ್ಟುವ ಹಿಂದೆ ಬಿಜೆಪಿಯ ಅಮಿತಾ ಶಾ, ಹಾಗೂ ಮೋದಿ ಹೆಸರು ರಾಜಕೀಯ ಅಂಗಳದಲ್ಲಿ ಕೇಳಿ ಬರುತ್ತಿದೆ.
Comments