ಡಿಕೆಶಿಯವರನ್ನೆ ಮುಂದಿನ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಮಾಡಲು ಹೈಕಮಾಂಡ್ ಚಿಂತನೆ !

ಕಾಂಗ್ರೆಸ್ ಪಕ್ಷ ರಾಜ್ಯ ಚುನಾವಣೆಗೆ ಸಕಲ ಸಿದ್ದತೆ ನಡೆಸಿದ್ದು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಲು ಹೈಕಮಾಂಡ್ ಚಿಂತನೆ ನಡೆಸಿದೆ.
ಐಟಿ ದಾಳಿಯ ನಂತರ ಡಿಕೆಶಿಯವರ ರಾಜಕೀಯ ಭವಿಷ್ಯ ಅಂತ್ಯ ಆದಂತೆ ಎಂದು ಎಲ್ಲರೂ ಮಾತನಾಡಿ ಕೊಳ್ಳುತ್ತಿದ್ದರು. ಆದರೆ ಡಿಕೆಶಿ ಮಾತ್ರ ಕಾಂಗ್ರೆಸ್ನಲ್ಲಿ ಐಟಿ ದಾಳಿ ಹಾಗೂ ಗುಜರಾತ್ ರಾಜ್ಯ ಸಭಾ ಚುನಾವಣೆಯ ನಂತರ ತನ್ನ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.ಅದರಲ್ಲೂ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಗೆಲುವಿಗೆ ಡಿಕೆಶಿಯವರ ಶ್ರಮವೇ ಕಾರಣವಾಗಿದೆ. ಇದರಿಂದ ಡಿಕೆಶಿಯವರ ಶಕ್ತಿ ಕಾಂಗ್ರೆಸ್ ಹೈಕಮಾಂಡ್ಗೆ ಮನವರಿಕೆಯಾಗಿದ್ದು ಇದರ ಜೊತೆಗೆ ರಾಜ್ಯದಲ್ಲಿ ಮುಂದೆ ಚುನಾವಣೆ ಬರಲಿದ್ದು ಆ ಚುನಾವಣೆಯಲ್ಲಿ ಡಿಕೆಶಿಯವರನ್ನೆ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಲು ಹೈಕಮಾಂಡ್ ಚರ್ಚೆಯಾಗಿದೆಯಂತೆ.ಇದಕ್ಕೆ ಪೂರಕ ಎನ್ನುವಂತೆ ಸೋನಿಯಾ ಗಾಂಧಿಗೆ ಹತ್ತಿರದವರಾದ ಜನಾರ್ಧನ ಪೂಜಾರಿಯವರು ಇಂದು ಮಂಗಳೂರಿನಲ್ಲಿ ಹೇಳಿರುವ ಹೇಳಿಕೆ ಕೂಡಾ ಡಿಕೆಶಿ ಸಿಎಂ ಅಭ್ಯರ್ಥಿಯಾಗುವ ಸುಳಿವನ್ನು ಕೊಟ್ಟಿದಾರೆ
ಒಟ್ಟಿನಲ್ಲಿ ಈ ಎಲ್ಲಾ ಲಕ್ಷಣವನ್ನ ಗಮನಿಸಿದಾಗ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ನಾಯಕತ್ವಕ್ಕೆ ಪೂರ್ಣವಿರಾಮ ಇಟ್ಟು ಡಿಕೆಶಿ ನಾಯಕತ್ವಕ್ಕೆ ಮುನ್ನುಡಿ ಬರೆಯುವ ದಿನ ಸನ್ನಿತವಾಗುತ್ತಿರುವ ಲಕ್ಷಣ ಕಾಣುತ್ತಿದೆ.
Comments