ಪ್ರಧಾನಿ ಮೋದಿಗೆ ಶಾಕ್ ಕೊಡ್ತಾರೆ ರಾಹುಲ್ ಗಾಂಧಿ?
ನವದೆಹಲಿ: ರಾಜ್ಯಸಭೆ ಚುನಾವಣೆ ಗೆದ್ದ ಖುಷಿಯಲ್ಲಿರುವ ಕಾಂಗ್ರೆಸ್ ನ ಅಹಮ್ಮದ್ ಪಟೇಲ್, ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಾ, ತಮ್ಮ ನಾಯಕ ರಾಹುಲ್ ಗಾಂಧಿ ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಮೋದಿಯನ್ನು ಶಾಕ್ ನೀಡ್ತಾರೆ ಎಂದು ಎಂದು ಭವಿಷ್ಯ ನುಡಿಯುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಸೋಲಿಸುವ ಸಂಪೂರ್ಣ ತಾಕತ್ತು ರಾಹುಲ್ ಗಿದೆ ಎಂದು ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.ಗುಜರಾತ್ ನಲ್ಲಿ ನಾನು ಗೆಲ್ಲಬಹುದು ಎಂದು ರಾಹುಲ್ ಗಾಂಧಿಗೆ ಸಂಪೂರ್ಣ ವಿಶ್ವಾಸವಿತ್ತು. ನಾನು ಗೆದ್ದಾಗ ರಾಹುಲ್ ಗಾಂಧಿಯವರೇ ನನಗೆ ಫೋನ್ ಮಾಡಿ ಶುಭ ಕೋರಿದ್ದರು. ಆಗ ನಾನು ಮುಂಬರುವ ವಿಧಾನಸಭೆಯಲ್ಲೂ ಕಾಂಗ್ರೆಸ್ ಗೆಲ್ಲಿಸುವುದಾಗಿ ಭರವಸೆ ನೀಡಿದ್ದೇನೆ ಎಂದು ಅಹಮ್ಮದ್ ಪಟೇಲ್ ಹೇಳಿದ್ದಾರೆ.
Comments