ಮಿಷನ್– 150’ ಗುರಿ ಮುಟ್ಟಲು ರಾಜ್ಯಕ್ಕೆ ಅಮಿತ್ ಷಾ ತಂತ್ರದೊಂದಿಗೆ ಭೇಟಿ
ಬೆಂಗಳೂರು: ಪಕ್ಷದೊಳಗಿನ ಗುಂಪುಗಾರಿಕೆ ನಿವಾರಿಸಿ ‘ಮಿಷನ್–150’ ಗುರಿ ತಲುಪುವ ಏಕೈಕ ಕಾರ್ಯಸೂಚಿಯೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಂದು ರಾಜ್ಯಕ್ಕೆ ಬರುವರು.
ಕಳೆದೊಂದು ತಿಂಗಳಿಂದ ತಮ್ಮದೇ ಮೂಲಗಳಿಂದ ರಾಜ್ಯ ಘಟಕದ ಸ್ಥಿತಿಗತಿ ಕುರಿತು ಸಂಪೂರ್ಣ ಮಾಹಿತಿ ಪಡೆದಿರುವ ಬಿಜೆಪಿ ಅಧ್ಯಕ್ಷರು, ಈ ಬಗ್ಗೆ ಸ್ಥಳೀಯ ನಾಯಕರಿಂದ ವಿವರಣೆ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಬಿಜೆಪಿಯೊಳಗೆ ಎಲ್ಲವೂ ಸರಿಯಿಲ್ಲವೆಂಬ ವಾಸ್ತವ ಅಧ್ಯಕ್ಷರ ಗಮನಕ್ಕೆ ಬಂದಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪನವರ ನಡುವಿನ ಮುಸುಕಿನ ಗುದ್ದಾಟ, ಕೇಂದ್ರ ಸಚಿವ ಅನಂತಕುಮಾರ್ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಗುಂಪುಗಾರಿಕೆ ಕುರಿತೂ ಅವರು ಚರ್ಚಿಸಲಿದ್ದಾರೆ ಎನ್ನಲಾಗಿದೆ.
ವಿಸ್ತಾರಕ್ ವರದಿಯೇ ಮಾನದಂಡ: ಪಕ್ಷದ ಬಗೆಗೆ ಸಾಮಾನ್ಯ ಜನರಿಗೆ ಯಾವ ಅಭಿಪ್ರಾಯವಿದೆ ಎಂಬುದನ್ನು ಅರಿತು, ಪಕ್ಷ ಬಲಪಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ‘ವಿಸ್ತಾರಕ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರ ವರದಿಯನ್ನೇ ಬಿಜೆಪಿ ಅಧ್ಯಕ್ಷರು ಅಳತೆಗೋಲಾಗಿ ಪರಿಗಣಿಸಲಿದ್ದಾರೆ
Comments