ಆ.12ಕ್ಕೆ ಜೆಡಿಎಸ್ ಕಚೇರಿಯಲ್ಲಿ ಸದಸ್ಯತ್ವ ನೋಂದಣಿ, ಪದಾಧಿಕಾರಿಗಳ ಸಭೆ
ಬೃಹತ್ ಬೆಂಗಳೂರು ಮಹಾನಗರ ವಿದ್ಯಾರ್ಥಿ ಜನತಾದಳ (ಜಾತ್ಯತೀತ) ದಿಂದ ಆಗಸ್ಟ್ ಹನ್ನೆರಡರ ಶನಿವಾರ ಬೆಳಗ್ಗೆ 11ಕ್ಕೆ ಸದಸ್ಯತ್ವ ನೋಂದಣಿ ಹಾಗೂ ನೂತನ ಪದಾಧಿಕಾರಿಗಳ ಸಭೆಯನ್ನು ಬೆಂಗಳೂರಿನ ಜೆಪಿ ಭವನ (ಜೆಡಿಎಸ್ ಕಚೇರಿ)ದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ದ ಕಾರ್ಯಾಧ್ಯಕ್ಷ ಎಂ.ಎಸ್.ನಾರಾಯಣ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಬೃಹತ್ ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ಅಧ್ಯಕ್ಷ ಆರ್.ಪ್ರಕಾಶ್ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಶರವಣ, ರಮೇಶ್ ಬಾಬು, ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ದ ಕಾರ್ಯಾಧ್ಯಕ್ಷ ಆರ್.ವಿ.ಹರೀಶ್, ರಾಜ್ಯ ಜೆಡಿಎಸ್ ಮುಖಂಡರಾದ ಎ.ಪಿ.ರಂಗನಾಥ್, ಟಿ.ಪ್ರಭಾಕರ್, ಎನ್.ರಾಜಣ್ಣ, ಮುಖಂಡರಾದ ಕೆ.ವಿ.ನಾರಾಯಣಸ್ವಾಮಿ, ಬಿ.ಎಚ್.ಚಂದ್ರಶೇಖರ್, ರಮೇಶ್ ಗೌಡ, ಉಪಮೇಯರ್ ಎಂ.ಆನಂದ್ ಮತ್ತಿತರರು ಭಾಗವಹಿಸುವರು.
Comments