ಐಟಿ ದಾಳಿಗೆ ನಾವು ಹೆದರಲ್ಲ: ಸಿಎಂ

ಬಿಜೆಪಿಯವರು ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿಕೊಂಡು ಐಟಿ ದಾಳಿ ನಡೆಸುತ್ತಿದ್ದಾರೆ. ಇದಕ್ಕೆಲ್ಲ ನಾವು ಹೆದರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಐಟಿ ದಾಳಿಯಲ್ಲಿ ಯಾವುದೇ ವಿಶೇಷವಿಲ್ಲ. ಐಟಿ ರಿಟರ್ನ್ ಸಲ್ಲಿಕೆ ಮಾಡಿರುವುದು ಸರಿ ಇದೆಯೋ, ಇಲ್ಲವೊ ಎಂಬುದನ್ನು ಪರಿಶೀಲಿಸುತ್ತಾರೆ. ಆದರೆ ಬಿಜೆಪಿಯವರು ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿಕೊಂಡು ಐಟಿ ದಾಳಿ ನಡೆಸುತ್ತಿರುವುದು ಸರಿಯಲ್ಲ. ಇದಕ್ಕೆ ನಾವು ಹೆದರವುದೂ ಇಲ್ಲ ಎಂದರು. ಕೆರೆಗಳ ಡಿನೋಟಿಫಿಕೇಷನ್ ವಿಷಯ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಸಭೆಯೊಂದರಲ್ಲಿ ಚರ್ಚೆ ನಡೆಸುವಾಗ ಕೆರೆಯಾಗಿಯೂ ಬಳಕೆ ಆಗದಿರುವ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಕೆಲ ಕೆರೆ ಅಂಗಳದಲ್ಲಿ ತಲೆ ಎತ್ತಿರುವ ಸ್ಲಮ್ಗಳು ಇಂದಿಗೂ ಕಂದಾಯ ಇಲಾಖೆ ಕಡತದಲ್ಲಿ ಕೆರೆ ಎಂದೇ ದಾಖಲಾಗಿದೆ. ಅದನ್ನು ತೆಗೆದು ಹಾಕಬೇಕು ಎಂದು ಹೇಳಿದ್ದೇನೆಯೇ ಹೊರತು ಎಲ್ಲೂ ಡಿನೋಟಿಫಿಕೇಷನ್ ಮಾಡುವುದಾಗಿ ಹೇಳಿಲ್ಲ. ಆದರೆ ಪ್ರತಿಪಕ್ಷಗಳು ಅದನ್ನೇ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
Comments