ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ‘ಲ್ಯಾಪ್ ಟಾಪ್ ‘ ಭಾಗ್ಯ
ಬೆಂಗಳೂರು: ರಾಜ್ಯ ಸರ್ಕಾರದಿಂದ ಎಲ್ಲಾ ಜಾತಿ ವರ್ಗಗಳಿಗೆ ಮೊದಲ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಬ್ ಟಾಪ್ ನೀಡಲು ಸರ್ಕಾರತಿರ್ಮಿನಿಸಿದೆ. ಆದರೆ ಕುಟುಂಬದ ಆದಾಯ ಮಿತಿ 2.5 ಲಕ್ಷ ದಾಟಿರಬಾರದು ಎಂದು ಉನ್ನತ ಶಿಕ್ಷಣ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಲ್ಲಾ ಜಾತಿಯ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡುತ್ತೇವೆ. ಒಟ್ಟು 300 ಕೋಟಿ ರೂ ವೆಚ್ಚದಡಿ 1.5 ಲಕ್ಷ ವಿದ್ಯಾರ್ಥಿಗಳಿಗೆ ಉತ್ತಮ ದರ್ಜೆಯ ಲ್ಯಾಪ್ ಟಾಪ್ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಇನ್ನು ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಈ ವರ್ಷದಿಂದಲೇ ಆರಂಭವಾಗಲಿದ್ದು, ಪ್ರಥಮ ಕ್ಲಾಸ್ ನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದರು.
Comments