ರಾಜ್ಯಸಭಾ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಜಯಭೇರಿ

ನವದೆಹಲಿ : ದಿನಪೂರ್ತಿ ನಡೆದ ಗುಜರಾತ್ ರಾಜ್ಯಸಭೆ ಚುನಾವಣೆಯ ಮೇಲಾಟಗಳ ಬಳಿಕ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಗೆಲುವು ಸಾಧಿಸಿದ್ದಾರೆ.
44 ಮತಗಳನ್ನ ಪಡೆದ ಅಹ್ಮದ್ ಪಟೇಲ್ ಪ್ರತಿಸ್ಪರ್ಧಿ ಬಿಜೆಪಿಯ ಬಲವಂತಸಿಂಗ್ ರಜಪೂತ್ ಅವರನ್ನ ಮಣಿಸಿದ್ದಾರೆ. ನಿರೀಕ್ಷೆಯಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜಯ ಗಳಿಸಿದ್ದಾರೆ.
ಆದರೆ, ಶತಾಯಗತಾಯ ಅಹ್ಮದ್ ಪಟೇಲ್ ಅವರನ್ನ ಮಣಿಸಬೇಕೆಂದು ಪಣತೊಟ್ಟಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ತೀವ್ರ ಮುಖಭಂಗವಾಗಿದೆ. ಇಬ್ಬರು ಶಾಸಕರು ಬಿಜೆಪಿ ಬೂತ್ ಏಜೆಂಟ್`ಗೆ ತೋರಿಸಿ ಮತದಾನ ಮಾಡಿದ್ದರಿಂದ ಎರಡು ಮತಗಳನ್ನ ಅಮಾನತು ಮಾಡಲಾಯ್ತು. ಹೀಗಾಗಿ, 44 ಮತೆಗಳನ್ನ ಪಡೆದ ಅಹ್ಮದ್ ಪಟೇಲ್ ಗೆಲುವಿನ ಪತಾಕೆ ಹಾರಿಸಿದರು. ಬಿಜೆಪಿಯ ಬಲವಂತ ಸಿಂಗ್ ಕೇವಲ 38 ಮತಗಳನ್ನ ಪಡೆದರು. ಹಣ ಮತ್ತು ತೋಳುಬಲ ಬಳಸಿಕೊಂಡು ದೇಶದ ಆಡಳಿತ ಯಂತ್ರವನ್ನ ದುರ್ಬಳಕೆ ಮಾಡಿಕೊಂಡವರ ಸೋಲು ಎಂದು ಹೇಳಿದ್ದಾರೆ.
Comments