ಅಮೇಠಿಯಲ್ಲಿ ರಾಹುಲ್ ಗಾಂಧಿ ನಾಪತ್ತೆ!

ಅಮೇಠಿ: ರಾಹುಲ್ ಗಾಂಧಿ ಅವರ ಲೋಕಸಭಾ ಕ್ಷೇತ್ರ ಅಮೇಠಿಯಲ್ಲಿ ರಾಹುಲ್ ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್ ಗಳು ಹರಿದಾಡುತ್ತಿವೆ. ಅಮೇಠಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಲೋಕಸಭಾ ಕ್ಷೇತ್ರ. ಅವರ ಕ್ಷೇತ್ರದಲ್ಲೇ ಇಂತಹ ಪೋಸ್ಟರ್ ಗಳು ಕಾಣಿಸಿಕೊಂಡಿವೆ.
'ಅಮೇಠಿ ಕೇ ಮಾನನೀಯ ಸಂಸದ್ ಅಮೇಠಿ ಸೇ ಲಪಟಾ ಹೈ' (ಅಮೇಠಿಯಲ್ಲಿ ಗೌರವಾನ್ವಿತಸಂಸದ ಅಮೇಠಿಯಿಂದ ನಾಪತ್ತೆಯಾಗಿದ್ದಾರೆ) ಎಂಬ ಒಕ್ಕಣೆ ಇರುವ ಪೋಸ್ಟರ್ ಗಳು ನಗರದ ಹಲವಡೆ ರಾರಾಜಿಸುತ್ತಿವೆ.
ರಾಹುಲ್ ಗಾಂಧಿ ಅವರು ಅಮೇಠಿ ಕ್ಷೇತ್ರಕ್ಕೆ ಕೊನೆ ಬಾರಿ ಭೇಟಿ ನೀಡಿದ್ದು ಈ ವರ್ಷ ಫೆಬ್ರವರಿಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಳು ನಡೆಯುತ್ತಿದ್ದ ವೇಳೆಯಲ್ಲಿ. ಪೋಸ್ಟರ್ ಗಳನ್ನು ಹಚ್ಚಲಾದ ಪ್ರಕರಣಕ್ಕಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಮೇಲೆ ಪಿತೂರಿಯ ಆರೋಪ ಕೇಳಿ ಬಂದಿದೆ. ಅಲ್ಲದೇ ಎಫ್ ಐಆರ್ ಕೂಡ ದಾಖಲಾಗಿದೆ.
Comments