ದೇವರ ಮೂರೆಹೋದ ಡಿ.ಕೆ. ಶಿವಕುಮಾರ್
ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆಯಲ್ಲಿ 3 ದಿನಗಳಿಂದ ನಡೆದ ಐ.ಟಿ. ದಾಳಿ ಮುಕ್ತಾಯವಾಗಿದೆ.ಮನೆಯಿಂದ ಹೊರ ಬಂದ ಡಿ.ಕೆ. ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದಾರೆ.
ಜೊತೆಗಿದ್ದ ನನ್ನ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಕಾನೂನು ಮೀರಿ ಏನನ್ನೂ ಮಾಡಿಲ್ಲ. 3 ದಿನಗಳಿಂದ ಪರಿಶೀಲನೆ ನಡೆದಿದೆ. ಪಂಚನಾಮೆಯ ದಾಖಲೆ ಪಡೆದು ಮತ್ತೊಮ್ಮೆ ಎಲ್ಲವನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ನಾನು ಈಗ ಏನು ಹೇಳುವ ಸಂದರ್ಭದಲ್ಲಿಲ್ಲ. ಎಲ್ಲಾ ಅಧಿಕಾರಿಗಳು ಅವರ ಕೆಲಸವನ್ನು ಮಾಡಿದ್ದಾರೆ. ನನ್ನ ಮನೆಗೆ ಭದ್ರತೆ ನೀಡಿದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸಿಬ್ಬಂದಿಗೆ ಅಭಿನಂದಿಸುತ್ತೇನೆ. ನನ್ನಿಂದ ನಿಮಗೆ ತೊಂದರೆಯಾಗಿದೆ ಎಂದಿದ್ದಾರೆ.ನಾನು ನಂಬಿರುವ ದೇವರ ದರ್ಶನಕ್ಕೆ ತೆರಳುತ್ತಿದ್ದೇನೆ ಎಂದ ಅವರು, ಯಾವ ದೇವಾಲಯ ಎಂಬುದನ್ನು ತಿಳಿಸಿಲ್ಲ. ದೇವರ ದರ್ಶನದ ಬಳಿಕ ರೆಸಾರ್ಟ್ ನಲ್ಲಿ ನಮ್ಮ ಪಕ್ಷದ ಗುಜರಾತ್ ಶಾಸಕರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
Comments