ರಾಜ್ಯಸಭೆ ಕಲಾಪದಲ್ಲಿ ಸಚಿನ್ ತೆಂಡುಲ್ಕರ್
ನವದೆಹಲಿ: ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಮತ್ತು ನಟಿ ರೇಖಾ ಅವರು ರಾಜ್ಯಸಭೆ ಕಲಾಪಕ್ಕೆಹಾಜರಾಗಿದ್ದಾರೆ. ಕೆಲ ಸದಸ್ಯರು ಸದನಕ್ಕೆ ಹಾಜರಾಗದಿರುವುದರ ಬಗ್ಗೆ ಸಮಾಜವಾದಿ ಪಕ್ಷದ ಸಂಸದ ನರೇಶ್ ಅಗರ್ ವಾಲ್ ಸದನದಲ್ಲಿ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಸಚಿನ್ ಕಲಾಪಕ್ಕೆ ಹಾಜರಾಗಿದ್ದಾರೆ. ಆದರೆ, ಸಚಿನ್ ಅವರು ಯಾವುದೇ ಪ್ರಶ್ನೆ ಕೇಳಲಿಲ್ಲ ಎನ್ನಲಾಗಿದೆ. ಬಾಕ್ಸರ್ ಮೇರಿ ಕೋಮ್ ಸಹ ಕಲಾಪಕ್ಕೆ ಹಾಜರಾದ್ರೆ, ಇನ್ನು ನಟಿ ರೇಖಾ ಕೂಡ ಸದನಕ್ಕೆ ಹಾಜರಾಗಿದ್ದರು.ಸದನಕ್ಕೆ ಹಾಜರಾಗದ ಸದಸ್ಯರ ನಾಮನಿರ್ದೇಶನ ಕ್ಯಾನ್ಸಲ್ ಮಾಡುವಂತೆ ನರೇಶ್ ಅಗರ್ ವಾಲ್ ಆಗ್ರಹಿಸಿದ್ದರು. ಅಲ್ಲದೇ, ಸಂತ್ ಕಲಾಪದಲ್ಲಿ ಭಾಗವಹಿಸಲು ಆಸಕ್ತಿ ಇಲ್ಲದಿದ್ದರೆ ಸಚಿನ್ ಮತ್ತು ರೇಖಾ ಅವರು ರಾಜೀನಾಮೆ ನೀಡಬೇಕು ಎಂದು ಹೇಳಿದ್ದರು.
Comments