ತ್ರಿಪುರ ಶಾಸಕರು ಆ.7ರಂದು ಬಿಜೆಪಿಗೆ ಸೇರ್ಪಡೆ
ಅಗರ್ತಲಾ: ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರಿಗೆ ಮತ ಹಾಕಿದಕಾರಣಕ್ಕೆ ಉಚ್ಛಾಟನೆ ಗೊಂಡ ತ್ರಿಪುರ ತೃಣಮೂಲ ಕಾಂಗ್ರೆಸ್ ನ ಆರು ಶಾಸಕರು ಆಗಸ್ಟ್ 7ರಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ತ್ರಿಪುರ ಟಿಎಂಸಿಯ ಈ ಆರು ಮಂದಿ ಉಚ್ಛಾಟಿತ ಶಾಸಕರು ನಾಳೆ ಶುಕ್ರವಾರ ದಿಲ್ಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ. ಈ ಶಾಸಕರ ಬಿಜೆಪಿ ಸೇರ್ಪಡೆಯನ್ನು ನಮ್ಮ ಕೇಂದ್ರ ನಾಯಕರು ಈಗಾಗಲೇ ಅಂತಿಮಗೊಳಿಸಿದ್ದಾರೆ ಎಂದು ಬಿಜೆಪಿ ವಕ್ತಾರ ವಿಕ್ಟರ್ ಶೋಮ್ ತಿಳಿಸಿದ್ದಾರೆ. ಉಚ್ಛಾಟಿತ ಆರು ತ್ರಿಪುರ ಟಿಎಂಸಿ ಶಾಸಕರು ತಾವು ಕೋವಿಂದ್ ಅವರನ್ನು ಬೆಂಬಲಿಸುವುದಾಗಿ ಬಹಿರಂಗವಾಗಿ ಹೇಳಿದ್ದರು.
Comments