ಪ್ರವಾಹದಿಂದ ಕಂಗಾಲಾಗಿದ್ದಾರೆ ಜನರು, ಪಾರ್ಟಿ ಮಾಡ್ತಿದ್ದಾರೆ 'ಕೈ' ಶಾಸಕರು
ಬೆಂಗಳೂರ: ಎತ್ತ ನೋಡಿದ್ರೆ ಪ್ರವಾಹ ಪರಿಸ್ಥಿತಿ, ನೆರವಿನ ಹಸ್ತಕ್ಕಾಗಿ ಕಾಯುತ್ತಿರುವ ಹಲವು ಜನರು,ಇದು ಗುಜುರಾತ್ ನಸದ್ಯದ ಪ್ರವಾಹ ಪರಿಸ್ಥಿತಿ.ಗುಜುರಾತ್ ನಲ್ಲಿ ಪ್ರವಾಹದ ಚಿತ್ರಣ ಹೇಳತೀರದು. ಜನರ ಕಷ್ಟಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳೇ ಪಾರ್ಟಿ ಮಾಡುವುದರಲ್ಲಿ ಬ್ಯುಸಿ ಇದ್ದಾರೆ!ಆಪರೇಷನ್ ಕಮಲಕ್ಕೆ ಬೆದರಿ ಗುಜುರಾತ್ ನಿಂದ ಬೆಂಗಳೂರಿಗೆ ಬಂದಿರುವ ಗುಜುರಾತ್ ಶಾಸಕರಿಗೆ ತಮ್ಮ ಕ್ಷೇತ್ರದ ಜನರ ಹಿತಾಸಕ್ತಿ ಮರೆತಿದ್ದಾರೆಯೇ? ಎಂದು ಪ್ರಶ್ನಿಸುವಂತಾಗಿದೆ. ಕೈ ಶಾಸಕರಿಗೆ ಜನರ ಹಿತಾಸಕ್ತಿ ಮುಖ್ಯವಲ್ಲ ಗುಜುರಾತ್ ನಲ್ಲಿ ಹಲವಡೆ ಪ್ರವಾಹ ಭೀತಿ ಎದುರಾಗಿದೆ. ಇಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ಜನರು ಸಂಕಷ್ಟದಲ್ಲಿದ್ದರೂ ಕೂಡ ಇತ್ತ ಬೆಂಗಳೂರಿನಲ್ಲಿ ಖಾಸಗಿ ರೆಸಾರ್ಟ್ ನಲ್ಲಿ ಭರ್ಜರಿ ಪಾರ್ಟಿ ನಡೆಯುತ್ತಿದೆ.
ಬಿಡದಿ ಬಳಿ ಇರುವ ಖಾಸಗಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರು, ತಮ್ಮ ಕ್ಷೇತ್ರದಲ್ಲಿ ಉಂಟಾಗಿರುವಪ್ರವಾಹ ಪರಿಸ್ಥಿತಿಯ ಚಿಂತೆಯಿಲ್ಲದೇ ಹಾಯಾಗಿ ಕಾಲ ಕಳೆಯುವಂತಿದೆ. ಬಗೆ ಬಗೆಯ ಖಾದ್ಯಗಳನ್ನು ಸವಿಯುತ್ತಾ, ಮ್ಯೂಸಿಕ್ ಜತೆಗೆ ಸ್ಟೆಪ್ ಹಾಕುತ್ತಾ ಇರುವುದು ಮೂಲಗಳಿಂದ ತಿಳಿದು ಬಂದಿದೆ.
Comments