ಸಿಎಂ ವಾಚ್ ಪ್ರಕರಣ ಪ್ರಧಾನಿ ಅಂಗಳದಲ್ಲಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ದುಬಾರಿ ವಾಚ್ ಪ್ರಕರಣ ಇದೀಗ ಪ್ರಧಾನಿ ಅಂಗಳಕ್ಕೆ ತಲುಪಿದೆ.
ತಮಗೆ ಹ್ಯೂಬ್ಲಟ್ ವಾಚ್ ಕೊಟ್ಟ ಉದ್ಯಮಿಗೆ ಸಿಎಂ ಸಿದ್ದರಾಮಯ್ಯ ಉಡುಪಿಯ ಸರ್ಕಾರಿ ಆಸ್ಪತ್ರೆ ಮತ್ತು ಜೋಗ್ ಫಾಲ್ಸ್ ಅಭಿವೃದ್ಧಿಗೆ ಸಂಬಂಧಿಸಿದ ಎರಡು ಯೋಜನೆಗಳನ್ನು ನೀಡಿರೋದಾಗಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಗಂಭೀರ ಆರೋಪ ಮಾಡಿದರು. ಈ ಸಂಬಂಧ ಅಡ್ವಕೇಟ್ ರಜತ್ ಗೌಡ ಎಂಬುವವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಜತೆಗೆ ಮಾಜಿ ಪ್ರಧಾನಿ ದೇವೇಗೌಡ, ಸ್ಪೀಕರ್ ಗೂ ಪತ್ರ ಬರೆದಿದ್ದಾರೆ.
Comments