ರಮಾನಾಥ್ ರೈ ಅವರು ಹೆಬ್ಬಟ್ಟಿಗೆ ಮಾತ್ರ- ಹೆಚ್ಡಿಕೆ
ಬೆಂಗಳೂರು: ರಮಾನಾಥ್ ರೈ ಅವರು ಗೃಹ ಸಚಿವರಾಗುತ್ತಾರೆ ಎಂದು ಕೇಳಿ ಬರುತ್ತಿದೆ. ಅವರು ಹೆಬ್ಬಟ್ಟಿಗೆ ಮಾತ್ರ, ಆದರೆಕೆಲಸ ನಿರ್ವಹಿಸುವುದು ಕೆಂಪಯ್ಯ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ನಿನ್ನೆಉಡುಪಿಯಲ್ಲಿ ಮಾತನಾಡಿರುವ ಅವರು, ಸಿದ್ದರಾಮಯ್ಯ ಅವರಿಗೆ ಕೆಂಪಯ್ಯ ಏಕೆ ಅನಿವಾರ್ಯ ಎಂದು ಪ್ರಶ್ನಿಸಿದ್ದರು. ಕಾಂಗ್ರೆಸ್ ಈಗ ಮಾಡಿದ್ದುಣ್ಣು ಮಾರಾಯಾ ಎನ್ನುವ ಸ್ಥಿತಿ ಬಂದಿದೆ. ಗುಜುರಾತ್ನ ಶಾಸಕರನ್ನು ಕರೆತಂದು ರೆಸಾರ್ಟ್ ನಲ್ಲಿ ಇರಿಸಿದ್ದಾರೆ.ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ನ 7 ಶಾಸಕರನ್ನು ಹೈಜಾಕ್ ಮಾಡಿದರು, ಅದರ ಫಲ ಈಗ ಉಣ್ಣುತ್ತಿದ್ದಾರ ಎಂದು ಹೇಳಿದರು. ರಾಜ್ಯದ ಜಲಾಶಯಗಳಲ್ಲಿ ನೀರನ್ನು ಕೆರೆಗಳಿಗೆ ಹರಿಸುವಲ್ಲಿ ಸರ್ಕಾರ ಕೆಲಸ ಮಾಡಲಿ, ಬದಲಾಗಿನೆರೆ ರಾಜ್ಯಕ್ಕೆ ಹರಿಯಬಿಡುವ ಅಗತ್ಯ ಇಲ್ಲ. ನಮ್ಮ ಕೆರೆಗಳಿಗೆ ಜಲಾಶಯಗಳ ನೀರು ಹರಿಸಲಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
Comments