ಪಾಕ್ ಹಂಗಾಮಿ ಪ್ರಧಾನಿ ಆಗಿ ಶಾಹಿದ್ ಆಯ್ಕೆ

ಇಸ್ಲಮಾಬಾದ್ : ಪೆಟ್ರೋಲಿಯಂ ಖಾತೆಯ ಮಾಜಿ ಸಚಿವ ಪಿಎಂಎಲ್- ಎನ್ ಹಿರಿಯ ಮುಖಂಡ ಶಾಹಿದ್ ಖಕಾನ್ ಅಬ್ಬಾಸಿ ಅವರು ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಆಯ್ಕೆಯಾಗಿರುವುದು ತಿಳಿದು ಬಂದಿದೆ.
ಪಾಕಿಸ್ತಾನದ ಮುಸ್ಲಿಂ ಲೀಗ್ ನವಾಜ್ ಸಂಸದೀಯ ಪಕ್ಷದ ಸಭೆಯಲ್ಲಿ ನವಾಜ್ ಷರೀಫ್ ಅವರು ಅಬ್ಬಾಸಿ ಅವರ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ
ಎಂದು ಮಾಧ್ಯಮಗಳು ವರದಿ ಮಾಡಿವೆ. ನವಾಜ್ ಷರೀಫ್ ಅವರ ಸಹೋದರ ಷಾಬಾಜ್ ಷರೀಫ್ ಅವರು ಸಂಸತ್ತಿಗೆ ಆಯ್ಕೆಯಾಗುವವರೆಗೆ ಶಾಹಿದ್ ಅವರು ಪ್ರಧಾನಿ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
Comments