ಪಾಕಿಸ್ತಾನ ಮುಂದಿನ ಪ್ರಧಾನಿ ಯಾರು?
ಪನಾಮಾ ಪೇಪರ್ಸ್ ಪ್ರಕರಣದ ಕುರಿತು ವಿಚಾರಣೆ ನಡೆಸಿರುವ ಪಾಕಿಸ್ತಾನದ ಸುಪ್ರಿಂ ಕೋರ್ಟ್ ನವಾಜ್ ಷರೀಫ್ ಅವರನ್ನು ದೋಷಿ ಎಂದು ಮಹತ್ವದ ತೀರ್ಪು ಪ್ರಕಟಿಸಿದೆ. ಸುಪ್ರಿಂಕೋರ್ಟ್ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಷರೀಫ್ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಷರೀಫ್ ಅವರ ರಾಜೀನಾಮೆ ಯಿಂದಾಗಿ ಮುಂದಿನ ಪ್ರಧಾನಿ ಯಾರು ಆಗಬೇಕೆಂದರೆ ಬಗ್ಗೆ ಪಾಕಿಸ್ತಾನ ಮುಸ್ಲಿಂ ಲೀಗ್- ನವಾಜ್ ಪಕ್ಷ ತೀರ್ಮಾನಿಸಲಿದೆ. ನವಾಜ್ ಷರೀಫ್ ಅವರೇ ಈ ಪಕ್ಷದ ಮುಖ್ಯಸ್ಥರಾಗಿರುವುದರಿಂದ ಅವರೇ ಮುಂದಿನ ಪ್ರಧಾನಿ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. ಪಾಕ್ ಸರ್ಕಾರ
ದಲ್ಲಿ ಬಹುಮತ ಹೊಂದಿರುವ ಪಿಎಂಎಲ್ ಎನ್ ಪಕ್ಷ ವು ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲಿದ್ದು, ಕೆಲವು ಪ್ರಮುಖರ ಹೆಸರುಗಳ ಪಟ್ಟಿಯಲ್ಲಿದೆ. ಇನ್ನು ಪ್ರಧಾನಿ ಹುದ್ದೆಗೇರಲು ಷರೀಫ್ ಅವರ ಕಿರಿಯ ಸಹೋದರ ಶಹಬಾಜ್ ಷರೀಫ್ ಅವರ ಹೆಸರು ಪ್ರಧಾನಿ ಸ್ಥಾನಕ್ಕೆ ಕೇಳಿ ಬರುತ್ತಿದೆ. ಶಹಬಾಜ್ ಷರೀಫ್
ಅವರು ಪಂಜಾಬ್ ಪ್ರಾಂತ್ಯದಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಶಹಬಾಜ್ ಷರೀಫ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ನ್ಯಾಷನಲ್ ಅಸೆಂಬ್ಲಿಯಲ್ಲಿ ಆಯ್ಕೆಯಾದರೆ ಮಾತ್ರ ಪ್ರಧಾನಿಯಾಗಬಹುದು.
ಸದ್ಯ ಪಾಕ್ ರಕ್ಷಣಾ ಸಚಿವರಾಗಿರುವ ಖ್ವಾಜಾ ಆಸಿಫ್ ಅವರಿಗೆ ಪ್ರಧಾನಿ ಪಟ್ಟ ಒಲಿಯುವ ಸಾಧ್ಯತೆಗಳು ಹೆಚ್ಚು. ಒಂದು ಕಾಲದಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ಆಸಿಫ್ ೧೯೯೧ ರಿಂದ ಪಿಎಂಎಲ್ ಎನ್ ಪಕ್ಷದಲ್ಲಿ ಮಹತ್ತರ ಸ್ಥಾನಗಳನ್ನು ವಹಿಸಿಕೊಂಡಿದ್ದಾರೆ. ಸಿಯಾಲ್ ಕೋಟ್ ನಿಂದ ನ್ಯಾಷನಲ್ ಅಸೆಂಬ್ಲಿಗೆ ಆಯ್ಕೆಯಾಗಿದ್ದ ಇವರು ಪಾಕಿಸ್ತಾನ ಪ್ರಬಲ ರಾಜಕಾರಿಣಿ ಎಂದೆನಿಸಿಕೊಂಡಿದ್ದಾರೆ.
Comments