ಬಿಹಾರ ರಾಜಕೀಯದಲ್ಲಿ ಹೈಡ್ರಾಮಾ
ಪಾಟ್ನಾ: ಆರ್ ಜೆಡಿಗೆ ಸಡ್ಡು ಹೊಡೆದು ಬಿಜೆಪಿ ಜತೆ ಸ್ನೇಹ ಬೆಳಸಿ ಸರ್ಕಾರ ರಚಿಸಿರುವ ಜೆಡಿಯು ನಾಯಕ ಸಿಎಂ ನಿತೀಶ್ ಕುಮಾರ್ ಇಂದು ವಿಶ್ವಾಸಮತ ಯಾಚನೆ ಮಾಡುತ್ತಿದ್ದಾರೆ. ವಿಶೇಷವೆಂದರೆ ವಿಶ್ವಾಸಮತ ಯಾಚನೆಗೆ ಮೊದಲು ಬಿಹಾರ ರಾಜಕೀಯದಲ್ಲಿ ಹೈಡ್ರಾಮವೇ ನಡೆದಿದೆ ಎನ್ನಲಾಗಿದೆ. ಒಂದೆಡೆ ನಿತೀಶ್ ನಡೆಗೆ ಮಿತ್ರ ಶರದ್ ಯಾದವ್ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆ ವಿರೋಧಿ ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರು ನಿತೀಶ್ ಕುಮಾರ್ ಗೆ ಬೆಂಬಲ ನೀಡಲು ಮುಂದಾಗಿದ್ದಾರೆ.
ಒಂದೆಡೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಿತೀಶ್ ಆರ್ ಜೆಡಿ ಕೈಕೊಟ್ಟು ಬಿಜೆಪಿ ಸಖ್ಯ ಬೆಳೆಸಿರುವುದನ್ನು ಅಕ್ರಮ ಎಂದು ಜರೆಯುತ್ತಿದ್ದರೆ, ಅವರದೇ ಪಕ್ಷದ ಶಾಸಕರು ಬೆಂಬಲ ಸೂಚಿಸುತ್ತಿರುವುದು ಕಾಂಗ್ರೆಸ್ ಗೆ ಮುಜುಗರ ತರಲಿದೆ.
Comments