ವ್ಯಕ್ತಿಯೊಬ್ಬರ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಚಂದ್ರಬಾಬು ನಾಯ್ಡು

27 Jul 2017 10:33 AM | Politics
530 Report

ಉಪಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ತಾಳ್ಮೆ ಕಳೆದುಕೊಂಡು ವ್ಯಕ್ತಿಯೊಬ್ಬರ ಮೇಲೆ ಕೋಪಗೊಂಡ ಪ್ರಸಂಗ ನಡೆದಿದೆ. ಬುಧುವಾರ ಚಂದ್ರಬಾಬು ನಾಯ್ಡು ಕರ್ನೂಲ್ ಜಿಲ್ಲೆಯ ನಂದ್ಯಾಲದಲ್ಲಿ ಉಪಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ವ್ಯಕ್ತಿಯೊಬ್ಬರು ಪ್ರದೇಶದಲ್ಲಿನ ವಿದ್ಯುತ್ ಸಮಸ್ಯೆ ಬಗ್ಗೆ ಪ್ರಶ್ನಿಸಿದ್ರು, ಆಗ ಕೋಪಗೊಂಡ ಚಂದ್ರಬಾಬು ನಾಯ್ಡು  ನನ್ನ ಜತೆ ಈ ರೀತಿ ಮಾತನಾಡಲು ಇಷ್ಟೊಂದು ಜನ ಕಾರ್ಯಕರ್ತರ ಮಧ್ಯೆ ನನ್ನ ಜತೆ ಈ ರೀತಿ ಮಾತನಾಡಲು ನಿನಗೆ ಎಷ್ಟು ಧೈರ್ಯ? ಎಂದು ಗರಂ ಆದ್ರು. ಅಲ್ಲದೇ ಆ ವ್ಯಕ್ತಿ ವಿರೋಧ ಪಕ್ಷದವನು, ಸಾರ್ವಜನಿಕ ಸಭೆಯನ್ನು ಹಾಳು ಮಾಡ್ತಿದ್ದಾನೆ ಎಂದ್ರು. ನೀನೇನು ಹುಚ್ಚನಾ? ವೈಎಸ್ ಆರ್ ಕಾಂಗ್ರೆಸ್ ನವರು ನಿನ್ನನ್ನು ಇಲ್ಲಿಗೆ ಕಳಿಸಿದ್ರೆ ನನ್ನ ಸಭೆಗೆ ಬರ್ಬೆಡ, ಮನೆಯಲ್ಲಿರು ಎಂದು ಚಂದ್ರ ಬಾಬು ನಾಯ್ಡು ಹೇಳಿದ್ರು.

Edited By

Suhas Test

Reported By

Sudha Ujja

Comments