ರಮಾನಾಥ್ ರೈ ಪ್ರಮಾಣ ವಚನ ಸ್ವೀಕಾರ?
ಬೆಂಗಳೂರು: ಇವತ್ತು ಗೃಹ ಖಾತೆ ಸಚಿವರಾಗಿ ರಮಾನಾಥ್ ರೈ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಸರ್ಕಾರದಉನ್ನತ ಮೂಲಗಳು ತಿಳಿಸಿವೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವ ರಮಾನಾಥ್ ರೈ ಮಾತುಕತೆ ನಡೆಸಿದ್ದಾರೆ.
ಗೃಹ ಖಾತೆ ವಹಿಸಿಕೊಳ್ಳಲು ಮೊದಲ ನಿರಾಕರಿಸಿದ್ದರು. ಆದ್ರೆ ಹೈಕಮಾಂಡ್ ಸೂಚನೆ ಮೇರೆಗೆ ಗೃಹ ಖಾತೆವಹಿಸಿಕೊಳ್ಳುವುದಕ್ಕೆ ಒಪ್ಪಿದ್ದಾರೆಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಗೃಹ ಖಾತೆ ಗೆ ರಾಜೀನಾಮೆ ನೀಡಿದಬಳಿಕ ಆ ಖಾತೆಯನ್ನು ಯಾರಿಗೂ ನೀಡಿರಲಿಲ್ಲ. ಆದ್ರೆ ರಮಾನಾಥ್ ರೈ ಅವರನ್ನು ಕರೆಸಿಕೊಂಡು ಸಿಎಂ ಗೃಹ ಖಾತೆ ಜವಾಬ್ದಾರಿ ವಹಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.
Comments