ರಾಜ್ಯ ಸರ್ಕಾರದ ಉದಾರ ನಡೆ,. ಹೊರ ರಾಜ್ಯದವರಿಗೆ ಮಣೆ ?

23 Jul 2017 11:10 AM | Politics
794 Report

ಬೆಂಗಳೂರು: ರಾಜ್ಯ ಸರ್ಕಾರದ ಉದಾರ ನಡೆಯಿಂದಾಗಿ ಖಾಸಗಿ ಕಾಲೇಜುಗಳಲ್ಲಿ 551 ವೈದ್ಯಕೀಯ ಸೀಟುಗಳ ಹೊರರಾಜ್ಯದ ವಿದ್ಯಾರ್ಥಿಗಳ ಪಾಲಾಗುತ್ತಿದೆ. ಈ ಸೀಟು ಪಡೆಯುವುದಕ್ಕಾಗಿ ಹೊರ ರಾಜ್ಯಗಳ 20,071 ರಾಜ್ಯದಲ್ಲಿ ದಾಖಲಾತಿ ಪರಿಶೀಲನೆ ಮಾಡಿಸಿಕೊಳ್ಳುತ್ತಿದ್ದಾರೆ.

 

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇತ್ತೀಚೆಗೆ ಪ್ರಕಟಣೆ ಮಾಡಿರುವ ವಿವರದಲ್ಲಿ ಓಪನ್ ಸೀಟ್ ವಿಭಾಗದಡಿ ೫೫೧ ಸೀಟು ಇವೆ. ಈ ಸೀಟಿಗಾಗಿ ಕರ್ನಾಟಕದವರಷ್ಟೇ ಅಲ್ಲ. ದೇಶದ ಯಾವುದೇ ಭಾಗದ ವಿದ್ಯಾರ್ಥಿ ಅರ್ಜಿ ಸಲ್ಲಿಸಬಹುದು. ನೀಟ್ ಮೆರಿಟ್ ನಲ್ಲಿ ನಲ್ಲಿ ಉತ್ತರ ಭಾರತದ ವಿದ್ಯಾರ್ಥಿಗಳು ಮುಂದಿದ್ದು, ಈ ಸೀಟುಗಳು ಸುಲಭವಾಗಿ ಅವರ ಪಾಲಾಗಬಹುದು ಎಂದು ವಿದ್ಯಾರ್ಥಿಗಳ ಪೋಷಕರ ಆಕ್ಷೇಪ.

ಅನೇಕ ರಾಜ್ಯಗಳ ಅಖಿಲ ಭಾರತ ಕೋಟಾದ ಸೀಟುಗಳನ್ನು ಬಿಟ್ಟು ಉಳಿದೆಲ್ಲಾ ಸೀಟುಗಳನ್ನು ತಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿಟ್ಟಿವೆ. ಇದರಿಂದಾಗಿ ಕರ್ನಾಟಕದ ವಿದ್ಯಾರ್ಥಿಗಳು ಮಹಾರಾಷ್ಟ್ರ ಕೇರಳ ಹಾಗೂ ಬೇರೆ ರಾಜ್ಯದಲ್ಲಿ ಸೀಟು ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ಇಲ್ಲಿ ಮಾತ್ರ ಎಲ್ಲಾ ರಾಜ್ಯದವರನ್ನು ಕರೆದು ಸೀಟು ಕೊಡಲಾಗುತ್ತದೆ ಎಂದು ಪೋಷಕರ ಆಕ್ಷೇಪ.

Edited By

venki swamy

Reported By

Sudha Ujja

Comments