ವೀರಶೈವ, ಲಿಂಗಾಯುತ ಬೇರೆ ಬೇರೆಯಲ್ಲ: ಬಿಎಸ್ವೈ
ವೀರಶೈವ, ಲಿಂಗಾಯುತ ಬೇರೆ ಬೇರೆಯಲ್ಲ ಎರಡು ಒಂದೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಕೆಲವರು ರಾಜಕೀಯ ಕಾರಣಕ್ಕಾಗಿ ವೀರಶೈವ ಸಮುದಾಯವನ್ನು ಒಡೆಯಲು ಯತ್ನಿಸುತ್ತಿದ್ದಾರೆ. ಇಂತಹ ಒತ್ತಡಗಳಿಗೆ ಮಣಿಯಬೇಡಿ ಎಂದು ವೀರಶೈವ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಲಿಂಗಾಯುತ ಧರ್ಮವು ಹಿಂದು ಧರ್ಮದ ಭಾಗ. ಅದರಲ್ಲಿ ವೀರಶೈವ, ಲಿಂಗಾಯುತ ಎನ್ನುವುದು ಇಲ್ಲವೇ ಇಲ್ಲ. ಸಿಎಂ ಸಿದ್ದರಾಮಯ್ಯ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.
Comments