'ಮೋದಿ ಮನ್ ಕಿ ಬಾತ್' ನಿಂದ ಹರಿದು ಬಂದ ಆದಾಯ ಎಷ್ಟು ಗೊತ್ತಾ...?
ನವದೆಹಲಿ: ಪ್ರಧಾನಿ ಮೋದಿಯವರ ಜನಪ್ರಿಯ ರೆಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಿಂದಾಗಿ ಆಕಾಶವಾಣಿಗೆ ಈವರೆಗೆ ಭಾರೀ ಆದಾಯ ಹರಿದು ಬಂದಿದೆ. ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮದಿಂದ ಬರೊಬ್ಬರಿ 10 ಕೋಟಿ ರೂ ಆದಾಯ ಹರಿದುಬಂದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಪ್ರಧಾನಿಯ ಮೂಲ ಹಿಂದಿ ಭಾಷಣವನ್ನು 18 ಭಾಷೆಗಳಿಗೆ ತರ್ಜುಮೆ ಮಾಡಿ ಪ್ರಸಾರ ಮಾಡಲಾಗುತ್ತಿದೆ. ಹಾಗೂ 33 ಉಪಭಾಷೆಗಳಲ್ಲಿ ಅದೇ ದಿನ ಪ್ರಸಾರ ಮಾಡುತ್ತಿದೆ. ಜೊತೆಗೆ ಇಂಗ್ಲಿಷ್, ಸಂಸ್ಕೃತ ಅವರತರಣಿಕೆ ಪ್ರಸಾರ ಮಾಡಲಾಗುತ್ತದೆ. ದೇಶದ ಜನತೆಗಾಗಿ ಟ್ರಾನ್ಸ್ ಮಿಟ್ಟರ್ ಗಳ ಮೂಲಕ ಹಾಗೂ ವಿಶ್ವದಾದ್ಯಂತ ಕೇಳುಗರಿಗಾಗಿ ಅಂತರ್ಜಾಲ ಹಾಗೂ ಶಾರ್ಟ್ ವೇವ್ ಮೂಲಕ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತಿದೆ.
2014 ಅಕ್ಟೋಬರ್ 3 ರಂದು ಪ್ರಧಾನಿ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಚಾಲನೆ ದೊರಕಿತ್ತು. ಪ್ರತೀ ತಿಂಗಳು ನಿರ್ದಿಷ್ಟ ಭಾನುವಾರದಂದು ಕಾರ್ಯಕ್ರಮ ಪ್ರಸಾರವಾಗುತ್ತದೆ. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ರಾಷ್ಟ್ರ ಹಾಗೂ ಸಮಾಜದ ಪ್ರಸ್ತುತ ಸಂಗತಿಗಳ ಹಾಗೂ ವಿವಿಧ ವಿಷಯಗಳ ಬಗ್ಗೆ ಮಾತನಾಡುತ್ತಾರೆ.
ಈ ಕುರಿತು ಮಾಹಿತಿ ನೀಡಿರುವ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಥನ ಸಿಂಗ್ ರಾಠೋಡ್, 2016-17ರಲ್ಲಿ ರೂ.5.19 ಕೋಟಿ ಹಾಗೂ 2016-16ರಲ್ಲಿ ರೂ.4.78 ಕೋಟಿ ಆದಾಯವು ಆಕಾಶವಾವಣಿಗೆ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ಹರಿದುಬಂದಿದೆ ಎಂದು ತಿಳಿಸಿದ್ದಾರೆ.
Comments