ಸಿಎಂ ಸಿದ್ದರಾಮಯ್ಯಗೆ ಸೋನಿಯಾ ತರಾಟೆ!?

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಿದ್ದರಾಮಯ್ಯವರನ್ನು ತರಾಟೆಗೆ ತೆಗೆದುಕೊಂಡ ಘಟನೆ ವರದಿಯಾಗಿದೆ. ರಾಜ್ಯಕ್ಕೆ ಪ್ರತ್ಯೇಕ ಧ್ವಜ ರಚಿಸಲು ವಿಶೇಷ ಸಮಿತಿ ರಚಿಸಿರುವ ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿದೆ ಎನ್ನಲಾಗುತ್ತಿದೆ. ಇದು ರಾಷ್ಟ್ರದ ಸಮಗ್ರತೆಗೆ ಧಕ್ಕೆ ತರುವ ವಿಚಾರ, ಕೂಡಲೇ ಇದನ್ನು ಕೈಬಿಡಿ ಎಂದು ಸೋನಿಯಾ ಗಾಂಧಿ ದೂರವಾಣಿ ಮೂಲಕ ಸಿದ್ದರಾಮಯ್ಯರವರಿಗೆ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಜೂ. 6ಕ್ಕೆ ಸಮಿತಿ ರಚಿಸಿ ಆದೇಶ ಹೊರಡಿಸಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿದ್ದಂತೆ ರಾಜ್ಯಾದಂತ್ಯ ಇದರ ಪರ-ವಿರೋಧ ಚರ್ಚೆ ಆರಂಭವಾಗಿತ್ತು. ಸಾಕಷ್ಟು ಮಂದಿ ಇದನ್ನು ವಿರೋಧಿಸಿದ್ದರು. ಅದೇ ರೀತಿ ಇದನ್ನು ಸಮರ್ಥಿಸಿಕೊಂಡವರ ಸಂಖ್ಯೆಯೂ ಇದೆ.
Comments