ಉಪರಾಷ್ಟ್ರಪತಿ ರೇಸ್ ನಲ್ಲಿ ವೆಂಕಯ್ಯ ನಾಯ್ಡು
ನವದೆಹಲಿ: ರಾಷ್ಟ್ರಪತಿ ಆಯ್ಕೆ ತಾನಂದುಕೊಂಡಂತೇ ಆಗುತ್ತಿದೆ. ಆದ್ರೆ ಎನ್ ಡಿ ಎ ಮೈತ್ರಿಕೂಟವು ಉಪರಾಷ್ಟ್ರಪತಿ ಸ್ಥಾನಕ್ಕೂ ತನ್ನ ಅಭ್ಯರ್ಥಿಯನ್ನೇ ಗೆಲ್ಲಿಸಲು ಪಣತೊಟ್ಟಿದೆ. ಉಪರಾಷ್ಟ್ರಪತಿ ಸ್ಥಾನಕ್ಕೆ ಎನ್ ಡಿಎಯಿಂದ ಇಬ್ಬರು ರೇಸ್ ನಲ್ಲಿರುವುದು ತಿಳಿದು ಬಂದಿದೆ. ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹಾಗೂ ಕರ್ನಾಟಕ ವಿಧಾನಪರಿಷತ್ ಸಭಾಪತಿ ಡಿಎಚ್ ಶೆಂಕರಮೂರ್ತಿ ಅವರ ಹೆಸರುಗಳು ಉಪರಾಷ್ಟ್ರಪತಿ ಸ್ಥಾನದ ರೇಸ್ ಗೆ ಕೇಳಿಬರುತ್ತಿದೆ.
ಉಪರಾಷ್ಟ್ರಪತಿ ಸ್ಥಾನ ಬಿಜೆಪಿಗೆ ಬಹಳ ಮುಖ್ಯ. ಆಗಸ್ಟ್ 7ರಂದು ನೂತನ ಉಪರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ.ಕೇಂದ್ರದಲ್ಲಿ ಅಧಿಕಾರದಲ್ಲಿರುವ ತಾನು ಮಾಡುವ ಅನೇಕ ಮಸೂದೆಗಳಿಗೆ ರಾಜ್ಯಸಭೆಯಲ್ಲಿ ಒಪ್ಪಿಗೆ ಪಡೆಯಲು ಬಿಜೆಪಿ ಸಾಹಸ ಪಡಬೇಕಿದೆ.
ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆ ಇದೆ. ಅಲ್ಲಿ ಎನ್ ಡಿಎ ಹಾಗೂ ಇನ್ನಿತರ ಮಿತ್ರ ಪಕ್ಷಗಳ ಸದಸ್ಯರ ಸಂಖ್ಯೆ 74 ಇದ್ದರೆ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ಸಂಖ್ಯೆ 171 ಇದೆ. ಹೀಗಾಗಿ ತಮ್ಮ ಕಡೆಯಿಂದ ಸೂಕ್ತ ವ್ಯಕ್ತಿಯು ಉಪ ರಾಷ್ಟ್ರಪತಿಯಾದರೆ ಅದು ಬಿಜೆಪಿಯ ರಾಜ್ಯಸಭೆಯ ಸಮಸ್ಯೆಗೂ ಪರಿಹಾರ ಸಿಕ್ಕಂತಾಗುತ್ತದೆ ಎಂಬ ಇರಾದೆಯೂ ಪಕ್ಷದೊಳಗಿದೆ ಎಂದು ಹೇಳಲಾಗುತ್ತಿದೆ.ಕಾಂಗ್ರೆಸ್ ನ ಹಮೀದ್ ಅನ್ಸಾರಿ ಅವರು ಹಾಲಿ ಉಪರಾಷ್ಟ್ರಪತಿಯಾಗಿದ್ದಾರೆ.
Comments