ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ
ನವದೆಹಲಿ: ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭಗೊಳ್ಳಲಿದೆ. ಅಧಿವೇಶನದಲ್ಲಿ 16 ಮಸೂದೆಗಳನ್ನು ಮಂಡಿಸಲು ಪ್ರಧಾನಿ ಮೋದಿ ಸರ್ಕಾರ ಸಿದ್ದತೆ ಮಾಡಿಕೊಂಡಿದೆ. 16 ಹೊಸ ಮಸೂದೆಗಳಲ್ಲಿ ಪ್ರಮುಖ ಮೂರ್ನಾಲ್ಕು ಮಸೂದೆಗಳಿಗೆ ಅನುಮೋದನೆ ಪಡೆಯುವುದು ಸರ್ಕಾರದ ಅಜೆಂಡಾವಾಗಿದೆ. ಜೊತೆಗೆ ಲೋಕಸಭೆಯಲ್ಲಿ ಬಾಕಿ ಉಳಿದಿರುವ 8 ಮಸೂದೆಗಳು ಹಾಗೂ ರಾಜ್ಯಸಭೆಯಲ್ಲಿ 10 ಮಸೂದೆಗಳಿಗೆ ಅನುಮೋದನೆ ಪಡೆಯಲು ಸರ್ಕಾರ ಚಿಂತಿಸುತ್ತಿದೆ.
ಆದರೆ ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಲ್ಲೆ ಹತ್ಯೆಗಳು ಹಾಗೂ ಕಾಶ್ಮೀರದ ಪರಿಸ್ಥಿತಿ, ಭಾರತ-ಚೀನಾ ಗಡಿ ಬಿಕ್ಕಟ್ಟು ವಿಷಯಗಳ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ತಯಾರಿ ಮಾಡಿಕೊಂಡಿವೆ. ಇನ್ನು ಅಧಿವೇಶನ ಆರಂಭ ಹಿನ್ನಲೆಯಲ್ಲಿ ಭಾನುವಾರ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸರ್ವಪಕ್ಷಗಳ ಸಭೆ ನಡೆಸಿದರು. ಮುಂಗಾರು ಅಧಿವೇಶನ ಫಲಪ್ರದವಾಗಬೇಕಿದೆ. ಯಾವುದೇ ಗದ್ದಲ ಹಾಗೂ ಕೋಲಾಹಲವಿಲ್ಲದೇ ಅಧಿವೇಶನ ಸುಗಮವಾಗಿ ನಡೆಯುವ ಭರವಸೆ ಇದೆ ಎಂದು ಸ್ಪೀಕರ್ ಸುಮಿತ್ರಾ ತಿಳಿಸಿದ್ದಾರೆ.
Comments