ರಾಷ್ಟ್ರಪತಿ ಚುನಾವಣೆ ಹೋರಾಟ ಕಡ್ಡಾಯ -ಸೋನಿಯಾ ಗಾಂಧಿ

ರಾಷ್ಟ್ರಪತಿ ಚುನಾವಣೆ ಪೂರ್ವ ಸೋನಿಯಾ ಗಾಂಧಿ ಹೇಳಿಕೆ ನೀಡಿದ್ದಾರೆ. ದೇಶದ ಪ್ರಸ್ತುತ ಸ್ಥಿತಿ ಕುರಿತು ಪ್ರಸ್ತುತ ಪರಿಸ್ಥಿತಿ ಕುರಿತು ಮಾತನಾಡಿರುವ ಅವರು ಇತ್ತೀಚಿನ ದಿನಗಳಲ್ಲಿ ಹೋರಾಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಚುನಾವಣೆ ಸಂಬಂಧ ಪ್ರಸ್ತುತ ಸರ್ಕಾರದ ಬಗ್ಗೆ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದಾರೆ.
ಸಂಸದರ ಉದ್ಧೇಶಿಸಿ ಮಾತನಾಡಿರುವ ಸೋನಿಯಾ ಗಾಂಧಿ, ಪ್ರಸ್ತುತ ಚುನಾವಣೆ ತುಂಬಾ ಸವಾಲಾಗಿ ಮಾರ್ಪಟ್ಟಿದ್ದು, ಸಂವಿಧಾನ ಹಾಗೂ ಕಾನೂನು ಎರಡು ಅಪಾಯದಲ್ಲಿವೆ. ನಮ್ಮ ಭವಿಷ್ಯ ಮೌಲ್ಯಗಳ ಮೇಲೆ ಅವಲಂಬಿತವಾಗಿದೆ, ಕೆಲ ಮಂದಿ ನಮ್ಮ ವಿರುದ್ಧ
ವಿರಬಹುದು. ಅಲ್ಲದೇ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಸಂವಿಧಾನದ ಎರಡು ಮುಖಗಳಿದ್ದಂತೆ. ದೇಶವನ್ನು ಮುನ್ನಡೆಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದು ಮುಖ್ಯವಾಗಿದೆ ಎಂದು ಸೋನಿಯಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
Comments