ಭಾರತದೊಂದಿಗೆ ಸಹಕಾರಕ್ಕೆ ಅಸ್ತು

ವಾಷಿಂಗ್ಟನ್: ಈವರೆಗೆ ಪಾಕಿಸ್ತಾನಕ್ಕೆ ಭರ್ಜರಿ ಹಣಕಾಸು ನೆರವು ನೀಡುತ್ತಾ ಬಂದಿದ್ದ ಅಮೆರಿಕಾ ಈಗ ಆ ದೇಶಕ್ಕೆ ನೀಡಲಾಗುವ ಖಡಕ್ ವಿಧಿಗಳನ್ನು ವಿಧಿಸಿದೆ.
ಪಾಕ್ ಗೆ ಷರತ್ತು ಎಚ್ಚರಿಕೆ ನೀಡಿದ್ರೆ, ಇತ್ತ ಅಮೆರಿಕಾ ಭಾರತದ ಜತೆ ಬೇಷರತ್ ಸ್ನೇಹ ಬೆಳೆಸಿದೆ.ಈ ಬೆಳವಣಿಗೆ ಪಾಕಿಸ್ತಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ತಂದಿದೆ. ಭಯೋತ್ಪಾದನೆ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿಕೊಂಡು ಬಂದಿರುವ ಪಾಕ್ ರಕ್ಷಣಾ ನಿಧಿ ಪೂರೈಕೆ ಇನ್ನು ಮುಂದ ಕಠಿಣ ಎನ್ನುವ ಸಂದೇಶ ಅಮೆರಿಕಾ ರವಾನಿಸಿದೆ. ಭಯೋತ್ಪಾದಕರ ವಿರುದ್ಧ ಕೈಗೊಳ್ಳುತ್ತಿರುವ ಕ್ರಮ ತೃಪ್ತಿದಾಯಕವಾಗಿದ್ದರೆ ಮಾತ್ರವೇ ಹಣಕಾಸು ನೆರವು ನೀಡುತ್ತೇವೆ ಇಲ್ಲದಿದ್ದರೆ, ಎಲ್ಲವು ಬಂದ್ ಎಂದು ಪಾಕ್ ಗೆ ಅಮೆರಿಕಾ ಎಚ್ಚರಿಸಿದೆ. 651 ಕೋಟಿ ಡಾಲರ್ ಬಜೆಟ್.
ಅಮೆರಿಕಾ ಸಂಸತ್ ಅಧ್ಯಕ್ಷರು ಶನಿವಾರ ಮಹತ್ವದ ೩ ತಿದ್ದುಪಡಿ ವಿಧೇಯಕಗಳನ್ನು ಅಂಗೀಕರಿಸಿದ್ದಾರೆ. ಭಾರತದ ರಕ್ಷಣಾ ಸಹಕಾರ ವೃದ್ಧಿ ಸೇರಿ, ವಿಧೇಯಕಗಳನ್ನು ಅಂಗೀಕರಿಸಿದ್ದಾರೆ. ಭಾರತದ ಜತೆಗೆ ರಕ್ಷಣಾ ಸಹಕಾರ ವೃದ್ಧಿ ಸೇರಿ, ಇನ್ನುಳಿದ ಉದ್ದೇಶಗಳನ್ನೊಳಗೊಂಡ ಬರೋಬ್ಬರಿ ೬೫೧ ಬಿಲಿಯನ್ ಡಾಲರ್ ಮೊತ್ತದ ಬಜೆಟ್ ಮಂಡಿಸುವುದರ ಜತೆಗೆ ರಾಷ್ಟ್ರೀಯ ರಕ್ಷಣಾ ಸಹಕಾರ ಮುಂದುವರಿಸಿಕೊಂಡುಬಂದಿದ್ದ ಅಮೆರಿಕಾ , ಇದೀಗ ಒಂದಿಷ್ಟು ಷರತ್ತುಗಳನ್ನು ವಿಧಿಸಿದೆ. ಭಯೋತ್ಪಾದನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಯಾವುದೇ ಕಾರಣಕ್ಕು ರಕ್ಷಣಾ ನಿಧಿ ಮುಂದುವರಿಸಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಲಾಗಿದ್ದು, ಈ ಬಗ್ಗೆ ದಾಖಲೆ ಸಹಿತ ವರದಿ ಅಪೇಕ್ಷಿಸಿದೆ.
Comments