ಜೆಡಿಯು ಮಹತ್ವದ ಸಭೆ ಇಂದು
ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಇವತ್ತು ಸಂಜೆ ಜೆಡಿಯು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಭ್ರಷ್ಟಾಚಾರ ಆರೋಪದ ಬಗ್ಗೆ ವಿವಿರಣೆ ನೀಡುವಂತೆ ಜೆಡಿಯು ಪಕ್ಷವು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ನೀಡಿದ್ದ ಗಡವು ಶನಿವಾರ ಸಂಜೆ ಮುಗಿದಿದೆ.
ಈ ತಿಂಗಳ ೧೭ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿದ್ದರೂ ನಿತೀಶ್ ಈ ಸಂದರ್ಭ ಬಳಸಿಕೊಂಡು ರಾಜಕೀಯ ತಂತ್ರ ರೂಪಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಮಧ್ಯೆ ಜೆಡಿಯು ಮುಖ್ಯ ವಕ್ತಾರ ಸಂಜಯ್ ಸಿಂಗ್ ನಮ್ಮ ನಾಯಕ ನಿತೀಶ್ ಕುಮಾರ್ ಅವರು ಭ್ರಷ್ಟಾಚಾರದ ಜತೆ ರಾಜಿ ಮಾಡಿಕೊಳ್ಳುವುದಿಲ್ಲ ಎನ್ನುವುದು ಗೋಡೆ ಬರಹವಷ್ಟೇ ಸ್ಪಷ್ಟ. ಇದನ್ನು ಲಾಲು ಪ್ರಸಾದ್ ನೆನಪಿಟ್ಟುಕೊಳ್ಳಬೇಕು ಎಂದು ಹೇಳಿರುವುದು ಬಿಕ್ಕಟ್ಟು ಶಮನದ ಸಾಧ್ಯತೆಯನ್ನು ಕ್ಷೀಣಿವಾಗಿಸಿವೆ. ಶುಕ್ರವಾರ ಸಂಜೆ ರಾಂಚಿಯಿಂದ ಮರಳಿದ ನಂತರ ಪಕ್ಷದ ಮುಖಂಡರ ಜತೆಗೆ ತುರ್ತು ಸಭೆ ನಡೆಸಿದ ಅವರು ಎಫ್ ಐಆರ್ ದಾಖಲಾಗಿದೆ ಎಂದ ಮಾತ್ರಕ್ಕೆ ತಮ್ಮ ಪುತ್ರ ತೇಜಸ್ವಿ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
Comments